ADVERTISEMENT

ಮಾಜಿ ಸಚಿವರಿಂದ ರೈತರಿಗೆ ಧನ ಸಹಾಯ

​ಪ್ರಜಾವಾಣಿ ವಾರ್ತೆ
Published 18 ಜನವರಿ 2011, 10:00 IST
Last Updated 18 ಜನವರಿ 2011, 10:00 IST

ಹೊಸದುರ್ಗ: ತಾಲ್ಲೂಕಿನ ಚಿಕ್ಕತೇಕಲವಟ್ಟಿ ಗ್ರಾಮದಲ್ಲಿ ಇತ್ತೀಚೆಗೆ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ರಾಗಿ ಬಣವೆ ಕಳೆದುಕೊಂಡ ಮೂರು ಮಂದಿ  ರೈತರಿಗೆ ಮಾಜಿ ಸಚಿವ ಗೂಳಿಹಟ್ಟಿ ಶೇಖರ್  ವೈಯಕ್ತಿಕವಾಗಿ ಒಟ್ಟು ` 90 ಸಾವಿರ ಪರಿಹಾರ ಧನ ನೀಡಿದರು.

ಗ್ರಾಮದಲ್ಲಿ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ರಾಗಿ ತೆನೆ ಸಹಿತ ಒಟ್ಟಲಾದ ಬಣವೆಗೆ ಬೆಂಕಿ ಬಿದ್ದು ರೈತರು ಅಪಾರ ನಷ್ಟಕ್ಕೊಳಗಾಗಿದ್ದರು. ವಿಷಯ ತಿಳಿದ ಮಾಜಿ ಸಚಿವ ಗೂಳಿಹಟ್ಟಿ ಡಿ. ಶೇಖರ್  ಬೆಂಕಿ ಆಕಸ್ಮಿಕದಲ್ಲಿ ನಷ್ಟಕ್ಕೊಳಗಾದ ರೈತ ಕರಿಯಪ್ಪ ಅವರಿಗೆ `52 ಸಾವಿರ  ನರಸಿಂಹಪ್ಪ ಅವರಿಗೆ ` 26 ಸಾವಿರ ಹಾಗೂ ದೇವರಾಜು ಎಂಬುವರಿಗೆ ` 12 ಸಾವಿರರೂ ನಗದು ಹಣವನ್ನು ವೈಯಕ್ತಿಕವಾಗಿ ನೀಡಿ ಸಾಂತ್ವನ ಹೇಳಿದರು.

ಇದೇ ಸಂದರ್ಭದಲ್ಲಿ ಗ್ರಾಮದ ಅಂಗವಿಕಲ ರಾಮಣ್ಣ ಅವರಿಗೆ  ಸ್ವಂತ ಉದ್ಯೋಗ ಕೈಗೊಳ್ಳಲು ಗೂಳಿಹಟ್ಟಿ ಶೇಖರ್ ಅಭಿಮಾನಿ ಬಳಗದ ವತಿಯಿಂದ ` 10 ಸಾವಿರ  ಹಣಕಾಸು ನೆರವು ನೀಡಲಾಯಿತು.ಮಾಡದಕರೆ ಹೋಬಳಿ ದೊಡ್ಡಘಟ್ಟ ಗ್ರಾಮದಲ್ಲಿ ಸಂಭವಿಸಿದ  ಬೆಂಕಿ ಆಕಸ್ಮಿಕದಲ್ಲಿ ಮನೆ ಕಳೆದುಕೊಂಡು ನತದೃಷ್ಟ ಗೋವಿಂದಪ್ಪ ಎಂಬುವರಿಗೆ  ಪುನರ್ವಸತಿಗಾಗಿ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ವೈಯಕ್ತಿಕವಾಗಿ ` 50 ಸಾವಿರ ನಗದು ನೆರವು ನೀಡಿದರು.ವಕೀಲ ಸುರೇಶ್, ತಿಮ್ಮಪ್ಪ ಸೇರಿದಂತೆ ಹಲವಾರು ಮುಖಂಡರು ಈ ಸಂದರ್ಭದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.