ADVERTISEMENT

ಮಾರಮ್ಮ ದೇವಸ್ಥಾನಕ್ಕೆ ನೆರವಿನ ಭರವಸೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 9:25 IST
Last Updated 21 ಸೆಪ್ಟೆಂಬರ್ 2011, 9:25 IST

ಹಿರಿಯೂರು: ತಾಲ್ಲೂಕಿನ ಯರದಕಟ್ಟೆ ಗ್ರಾಮದಲ್ಲಿ ಚಲವಾದಿ ಜನಾಂಗದವರು ನೂತನವಾಗಿ ನಿರ್ಮಿಸುತ್ತಿರುವ ಕಣಿವೆ ಮಾರಮ್ಮ ದೇವಸ್ಥಾನದ ಕಾಮಗಾರಿ ಪೂರ್ಣಗೊಳಿಸಲು ಆರ್ಥಿಕ ನೆರವು ನೀಡಲಾಗುವುದು ಎಂದು ಮಂಗಳವಾರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಡಿ. ಸುಧಾಕರ್ ಭರವಸೆ ನೀಡಿದರು.

ದೇಗುಲದ ಗೋಪುರ ನಿರ್ಮಾಣ ಬಾಕಿ ಇದ್ದು, ಅದಕ್ಕೆ ರೂ 25 ಸಾವಿರ  ನೀಡುತ್ತೇನೆ. ಗ್ರಾಮದ ಪರಿಶಿಷ್ಟ ಕಾಲೊನಿಯಲ್ಲಿ ಭಕ್ತರು ನಿರ್ಮಿಸುತ್ತಿರುವ ದೇಗುಲಕ್ಕೂ ರೂ 1 ಲಕ್ಷ ವಂತಿಗೆ ನೀಡುತ್ತೇನೆ. ಗ್ರಾಮಕ್ಕೆ ಮೂಲಸೌಲಭ್ಯ ಕಲ್ಪಿಸಲು ಸಮಗ್ರ ಯೋಜನೆ ತಯಾರಿಸಿ ಕಾರ್ಯರೂಪಕ್ಕೆ ತರಲಾಗುವುದು ಎಂದು ಅವರು ಹೇಳಿದರು.

ರೂ 3.5 ಲಕ್ಷ ವೆಚ್ಚದ ಮಹಿಳಾ ಭವನ ಕಾಮಗಾರಿ ಮುಕ್ತಾಯ ಹಂತದಲ್ಲಿದೆ ಎಂದು ತಿಳಿಸಿದರು.
ದ್ಯಾಮಣ್ಣ, ಬಿ.ಆರ್. ಚಿನ್ನರಾಜು, ಕೆ. ನಾಗರತ್ನಮ್ಮ, ಆರ್. ಮಂಜು ನಾಥ್, ಕೆಂಚಮ್ಮ, ಹನುಮಕ್ಕ, ವೈ.ಆರ್. ಸಣ್ಣ ಜಲಜಯ್ಯ, ವೈ.ಆರ್. ಮೋಹನ್‌ಬಾಬು, ಎಚ್.ಆರ್. ತಿಮ್ಮಯ್ಯ, ಕಂದಿಕೆರೆ ಸುರೇಶ್‌ಬಾಬು, ರಾಘವೇಂದ್ರರೆಡ್ಡಿ, ಈರಲಿಂಗೇಗೌಡ, ಎಂ.ಟಿ. ಸುರೇಶ್, ಕಾಂತರಾಜ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.