ADVERTISEMENT

ಮೂಡಲಹಟ್ಟಿ: ಕೈಕೊಟ್ಟ ಮತಯಂತ್ರ

​ಪ್ರಜಾವಾಣಿ ವಾರ್ತೆ
Published 13 ಮೇ 2018, 11:55 IST
Last Updated 13 ಮೇ 2018, 11:55 IST

ಹಿರಿಯೂರು: ತಾಲ್ಲೂಕಿನ ಮೂಡಲಹಟ್ಟಿಯ ಮತಕೇಂದ್ರ 271 ರಲ್ಲಿ ಇವಿಎಂನಲ್ಲಿ ದೋಷ ಕಂಡುಬಂದಿದ್ದರಿಂದ 7 ಗಂಟೆಗೆ ಆರಂಭವಾಗಬೇಕಿದ್ದ ಮತದಾನ ಪ್ರಕ್ರಿಯೆ 10 ಗಂಟೆ ವೇಳೆಗೆ ಆರಂಭವಾಯಿತು ಎಂದು ಚುನಾವಣಾಧಿಕಾರಿ ರಾಜಗೋಪಾಲ್ ತಿಳಿಸಿದರು.

ಕಾಯ್ದಿಟ್ಟಿದ್ದ ಇವಿಂ ಹಾಗೂ ವಿ.ವಿ. ಪ್ಯಾಟ್ ಎರಡನ್ನೂ ಬದಲಾಯಿಸಿ ಮತದಾನಕ್ಕೆ ಅವಕಾಶ ಮಾಡಲಾಯಿತು. ಮತದಾನ ತಡವಾಗಿರುವ ಕಾರಣ ಸಂಜೆ 6.30 ರೊಳಗೆ ಮತಗಟ್ಟೆ ಆವರಣದ ಒಳಗೆ ಬರುವ ಎಲ್ಲ ಮತದಾರರಿಗೂ ಮತ ಚಲಾವಣೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಅವರು ಹೇಳಿದರು.

ಬೆಳಿಗ್ಗೆ 7 ಕ್ಕೆ ಮತದಾನ ಆರಂಭವಾದರೂ 9 ಗಂಟೆಯ ವೇಳೆಗೆ ಕೇವಲ ಶೇ 7ರಷ್ಟು ಮತದಾನ ಆಗಿತ್ತು. ಬೆಳಿಗ್ಗೆ 11 ಕ್ಕೆ ಶೇ 18, ಮಧ್ಯಾಹ್ನ 1ಕ್ಕೆ ಶೇ 35.82 ಮತದಾನ ಆಗಿತ್ತು. 3 ಗಂಟೆಗೆ ಶೇ 51ರಷ್ಟು ಸಂಜೆ5 ಕ್ಕೆ ಶೇ ರಷ್ಟು 71.91 ಮತದಾನ ಆಗಿದೆ ಎಂದು ಚುನಾವಣಾಧಿಕಾರಿ ತಿಳಿಸಿದರು.

ADVERTISEMENT

ಜೆಡಿಎಸ್ ಅಭ್ಯರ್ಥಿ ಡಿ.ಯಶೋಧರ ಅವರು ವೇದಾವತಿ ಬಡಾವಣೆಯ ಮತಗಟ್ಟೆಯಲ್ಲಿ ಮತಚಲಾಯಿಸಿದರು. ಆದಿವಾಲ ಗ್ರಾಮದ ಮತಗಟ್ಟೆ ಸಂಖ್ಯೆ 222 ರಲ್ಲಿ 105 ವರ್ಷದ ಮಕ್ಬುಲ್ ಬೀ ಮತ ಚಲಾಯಿಸಿದರು. ತಾಲ್ಲೂಕಿನಲ್ಲಿ ಮತದಾನ ಶಾಂತಿಯುತವಾಗಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.