ADVERTISEMENT

ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 9:30 IST
Last Updated 1 ಜೂನ್ 2011, 9:30 IST

ಹೊಸದುರ್ಗ: ತಾಲ್ಲೂಕಿನ ಜಾನಕಲ್ ಗ್ರಾಮದಲ್ಲಿ ಮಂಗಳವಾರ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಮಂಗಳವಾರ‌್ಙ 75 ಲಕ್ಷ ಅಂದಾಜಿನ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಂಠಾಪುರ ಹಳ್ಳದಿಂದ ಜಾನಕಲ್ ಗ್ರಾಮದ ವರೆಗಿನ 2.30 ಕಿ.ಮೀ. ರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣ ಕಾಮಗಾರಿ ತ್ವರಿತವಾಗಿ ಪೂರ್ಣಗೊಳ್ಳಲಿದ್ದು, ಇನ್ನುಳಿದ ರಸ್ತೆಗಳನ್ನು ಹಂತಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು.

ಜಾನಕಲ್ ನಾಯಕರಹಟ್ಟಿಯಿಂದ ಕಾಮನಕೆರೆ ಮಾರ್ಗವಾಗಿ ದೇವರಹಟ್ಟಿ ವರೆಗಿನ 2 ಕಿ.ಮೀ. ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿಯನ್ನು ಸದ್ಯದಲ್ಲಿಯೇ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಯಾವುದೇ ತಾರತಮ್ಯ ಇಲ್ಲದೇ ತಮ್ಮ ಗ್ರಾಮ ಹಾಗೂ ಕ್ಷೇತ್ರಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯಬೇಕು. ಅಭಿವೃದ್ಧಿ ದೃಷ್ಟಿಯಿಂದ ಪಕ್ಷ ಭೇದಮೆರೆತು ಎಲ್ಲರೂ ದುಡಿಯಬೇಕು ಎಂದರು,

ಸ್ಥಳೀಯ ಗ್ರಾ.ಪಂ. ಅಧ್ಯಕ್ಷೆ ಕಮಲೀಬಾಯಿ, ಉಪಾಧ್ಯಕ್ಷ ಪುಟ್ಟಸ್ವಾಮಿ, ಮಾಜಿ ಸದಸ್ಯ ತಿಪ್ಪೇಸ್ವಾಮಿ ದೊಡ್ಡಘಟ್ಟ ತಿಪ್ಪಯ್ಯ, ಗುತ್ತಿಗೆದಾರ ರೇವಣ್ಣ, ಗ್ರಾಮ ಪಂಚಾಯ್ತಿ  ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಸಹಾಯಹಸ್ತ ಜಾನಕಲ್ ನಾಯಕರಹಟ್ಟಿಯಲ್ಲಿ ವಾಸವಿರುವ ಅಸಹಾಯಕ ವಯೋವೃದ್ಧ ತಾಯಿ ಹಾಗೂ ಮಗಳಿಗೆ ವಸತಿ ಹಾಗೂ ಊಟದ ವ್ಯವಸ್ಥೆ ಕಲ್ಪಿಸುವುದಾಗಿ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆಶ್ವಾಸನೆ ನೀಡಿದರು.

ಜಗಳೂರು ಮೂಲದ ಸುಮಾರು 75 ವರ್ಷದ ತಾಯಿ ಹಾಗೂ 55 ವರ್ಷದ ಆಕೆಯ ಮಗಳು ಬಂದು ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಊಟ ವಸತಿ ಇಲ್ಲದೇ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯರಿಂದ ವಿಷಯ ತಿಳಿದ ಶಾಸಕ ಶೇಖರ್ ವೃದ್ಧರ ಸಮಸ್ಯೆಯನ್ನು ಆಲಿಸಿ ತಕ್ಷಣದ ಊಟ ವ್ಯವಸ್ಥೆಗಾಗಿ ಹಣ ನೀಡಿ  ವಸತಿ ಹಾಗೂ ಊಟದ ವ್ಯವಸ್ಥೆಗೆ ಅಗತ್ಯ ನೆರವು ನೀಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.