ADVERTISEMENT

ರಾಜಕಾಲುವೆ ದುರಸ್ತಿಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 12:17 IST
Last Updated 19 ಜೂನ್ 2018, 12:17 IST
ಹೊಸದುರ್ಗದ ಪುರಸಭೆ ಜೆಸಿಬಿ ಸಹಾಯದಿಂದ ಇಲ್ಲಿನ ರಾಜಕಾಲುವೆ ಹೂಳನ್ನು ಹೊರ ತೆಗೆಯುತ್ತಿರುವುದು.
ಹೊಸದುರ್ಗದ ಪುರಸಭೆ ಜೆಸಿಬಿ ಸಹಾಯದಿಂದ ಇಲ್ಲಿನ ರಾಜಕಾಲುವೆ ಹೂಳನ್ನು ಹೊರ ತೆಗೆಯುತ್ತಿರುವುದು.   

ಹೊಸದುರ್ಗ: ಪಟ್ಟಣದ ರಾಜಕಾಲುವೆ ಹೂಳು ತೆಗೆಯುವ ಕಾರ್ಯಕ್ಕೆ ಇಲ್ಲಿನ ಪುರಸಭೆ  ಸೋಮವಾರ ಕ್ರಮ ಕೈಗೊಂಡಿದೆ.

40 ವರ್ಷಗಳ ಹಿಂದೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ರಾಜಕಾಲುವೆಯನ್ನು ಒಮ್ಮೆಯೂ ಪೂರ್ಣ ಪ್ರಮಾಣದಲ್ಲಿ ಸ್ವಚ್ಛತೆ ಮಾಡಿರಲಿಲ್ಲ. ಇದರಿಂದಾಗಿ 9 ಅಡಿ ಆಳದರಾಜಕಾಲುವೆಯಲ್ಲಿ 6 ಅಡಿಗೂ ಹೆಚ್ಚು ಆಳದವರೆಗೂ ಹೂಳು ತುಂಬಿಕೊಂಡಿತ್ತು. ಸಾಕಷ್ಟು ಗಿಡ, ಗಂಟಿ ಬೆಳೆದಿದ್ದು ಘನತ್ಯಾಜ್ಯದಿಂದ ತುಂಬಿ ತುಳುಕುತಿತ್ತು.

ಈ ಸ್ವಚ್ಛತೆ ಕಾರ್ಯ ನೆಪಮಾತ್ರಕ್ಕೆ ಆಗದೇ, ರಾಜಕಾಲುವೆ ತುಂಬೆಲ್ಲಾ ತುಂಬಿರುವ ಹೂಳನ್ನು ಸಂಪೂರ್ಣ ತೆಗೆಸಬೇಕು. ಆಗಾಗ ಸ್ವಚ್ಛತೆ ಮಾಡಬೇಕು  ಎನ್ನುತ್ತಾರೆ ಸಂತೆಪೇಟೆಯ ಯಶೋದಮ್ಮ, ಸಾವಿತ್ರಮ್ಮ.

ADVERTISEMENT

ಅಲ್ಲಲ್ಲಿ ಜೆಸಿಬಿ ಸಹಾಯ ದಿಂದ ರಾಜಕಾಲುವೆ ಹೂಳು ಹೊರ ತೆಗೆಸಲಾಗುತ್ತಿದೆ. ಜೆಸಿಬಿ ರಾಜಕಾಲುವೆಗೆ ಇಳಿಯದ ಕಡೆಗಳಲ್ಲಿ ಪೌರಕಾರ್ಮಿಕರ ಸಹಾಯದಿಂದ ಹೂಳು ತೆಗೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಎಚ್‌.ಮಹಾಂತೇಶ್‌ ಪ್ರತಿಕ್ರಿಯಿಸಿದರು.

‘ಘನತ್ಯಾಜ್ಯದಿಂದ ತುಂಬಿ ತುಳುಕುತ್ತಿರುವ ರಾಜಕಾಲುವೆ’ ಶೀರ್ಷಿಕೆಯಡಿ ಜೂನ್‌ 14ರಂದು ವರದಿ ಪ್ರಕಟಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.