
ಪ್ರಜಾವಾಣಿ ವಾರ್ತೆಧರ್ಮಪುರ (ಚಿತ್ರದುರ್ಗ): ಸಮೀಪದ ಸಂಗೇನಹಳ್ಳಿಯಲ್ಲಿ ಈರಣ್ಣ (56) ಎಂಬ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ.
`ಖಾಸಗಿಯಾಗಿ ತುಂಬ ಸಾಲ ಮಾಡ್ದ್ದಿದರು. ಎರಡು ತಿಂಗಳ ಹಿಂದೆ ಮಗಳ ಮದುವೆಗೆ ಮತ್ತಷ್ಟು ಸಾಲ ಮಾಡಿದ್ದು, ಅದನ್ನು ಮರುಪಾವತಿಸಲು ವಿಫಲರಾಗಿದ್ದರು. ಭಾನುವಾರ ತಮ್ಮ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ' ಎಂದು ಅವರ ಪತ್ನಿ ಕೆಂಚಮ್ಮ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.