ADVERTISEMENT

ವಾಣಿ ವಿಲಾಸ ಜಲಾಶಯಕ್ಕೆ ಬಾಗಿನ

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 6:35 IST
Last Updated 22 ಜನವರಿ 2011, 6:35 IST

ಹಿರಿಯೂರು: ತಾಲ್ಲೂಕಿನ ವಾಣಿ ವಿಲಾಸ ಜಲಾಶಯದ ನೀರಿನ ಮಟ್ಟ ಈ ಬಾರಿ 113 ಅಡಿಗೆ ಮುಟ್ಟಿರುವ ಕಾರಣಕ್ಕೆ ವಾಣಿ ವಿಲಾಸ ಸಾಗರ ಶತಮಾನೋತ್ಸವ ಸಮಿತಿ ಮತ್ತು ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಶುಕ್ರವಾರ ಗಂಗಾಪೂಜೆ ನೆರವೇರಿಸಿ, ಬಾಗಿನ ಅರ್ಪಿಸಲಾಯಿತು.

ಬೆಳಿಗ್ಗೆ 6ಕ್ಕೆ  ಪೂಜಾ ಸಮಿತಿಯವರು ಹಿರಿಯೂರಿನ ತೇರುಮಲ್ಲೇಶ್ವರಸ್ವಾಮಿಗೆ ರುದ್ರಾಭಿಷೇಕ ಪೂಜೆ ಮಾಡಿಸಿ, ವಾಣಿವಿಲಾಸಪುರಕ್ಕೆ ಕೊಂಡೊಯ್ದು, ಕಣಿವೆ ಮಾರಮ್ಮ ದೇವಿಯ ದೇಗುಲದಲ್ಲಿ ಅಭಿಷೇಕ ಹಾಗೂ ಬಾಗಿನ ಪೂಜೆ ನೆರವೇರಿಸಿದ ನಂತರ ಜಲಾಶಯಕ್ಕೆ ಬಾಗಿನ ಅರ್ಪಿಸಲಾಯಿತು.

ಪೂಜಾಕಾರ್ಯಕ್ರಮಕ್ಕೆ ಆಗಮಿಸಿದ ಪಟನಾಯಕನ ಹಳ್ಳಿಯ ನಂಜಾವಧೂತ ಸ್ವಾಮೀಜಿ ಹಾಗೂ ಮಾಜಿ ಸಚಿವ ಡಿ. ಸುಧಾಕರ್ ಅವರನ್ನು ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಂಡರು,

ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್. ತಿಮ್ಮಯ್ಯ, ಜಿ.ಪಂ. ನೂತನ ಸದಸ್ಯರಾದ ಪ್ರಕಾಶ್, ಚಂದ್ರಪ್ಪ, ದ್ಯಾಮೇಗೌಡ, ಮಹಾಲಿಂಗಪ್ಪ, ತಾ.ಪಂ. ಸದಸ್ಯೆ ಲಕ್ಷ್ಮೀದೇವಿ, ಸಿ.ಎನ್. ಸುಂದರ್, ಅಂಗಮುತ್ತು ಗೌಂಡರ್, ಗೌಂಡಪ್ಪಗೌಂಡರ್, ಬಿ.ವಿ. ಮಾಧವ, ಎಂ. ಜಯಣ್ಣ, ಎ. ಕೃಷ್ಣಸ್ವಾಮಿ, ಬಿ.ಕೆ. ಉಗ್ರಮೂರ್ತಿ, ಈರಲಿಂಗೇಗೌಡ, ಚಿಗಳಿಕಟ್ಟೆ ಕಾಂತರಾಜ್, ಎಸ್.ಆರ್. ವಿಶ್ವನಾಥ್, ಜೆ. ಹೊನ್ನಯ್ಯ, ಎಸ್.ಎಚ್. ರಂಗಸ್ವಾಮಿ, ಬಬ್ಬೂರು ಸುರೇಶ್, ರಾಘವೇಂದ್ರರೆಡ್ಡಿ, ಆರ್,ಕೆ. ಸದಾಶಿವಪ್ಪ, ಗ್ರಾ.ಪಂ. ಅಧ್ಯಕ್ಷ ಬಸವರಾಜ್, ಪೆರಿಸ್ವಾಮಿ, ರಾಮಲಿಂಗೇಗೌಡ  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.