ADVERTISEMENT

ಸ್ಮಾರಕ ಸಂರಕ್ಷಿಸಿ ಪರಂಪರೆ ಉಳಿಸಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2011, 4:45 IST
Last Updated 11 ಮಾರ್ಚ್ 2011, 4:45 IST
ಸ್ಮಾರಕ ಸಂರಕ್ಷಿಸಿ ಪರಂಪರೆ ಉಳಿಸಿ
ಸ್ಮಾರಕ ಸಂರಕ್ಷಿಸಿ ಪರಂಪರೆ ಉಳಿಸಿ   

ಚಿತ್ರದುರ್ಗ: ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಿ ಪರಂಪರೆಗಳನ್ನು ಉಳಿಸಿ ಬೆಳೆಸಬೇಕು ಎಂದು ಹಂಪಿ ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ಪ್ರಾಚ್ಯವಸ್ತು ವಿಭಾಗದ ಮುಖ್ಯಸ್ಥ ಡಾ.ಎನ್.ವೈ. ಸೋಮಶೇಖರ್ ಕರೆ ನೀಡಿದರು.ಚಂದ್ರವಳ್ಳಿಯ ಎಸ್‌ಜೆಎಂ ಕಾಲೇಜಿನ ಪರಂಪರೆ ಕೂಟ, ಪ್ರಾಚ್ಯವಸ್ತು ಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆ ವತಿಯಿಂದ ಜಿಲ್ಲೆಯ ಕಲೆ ಮತ್ತು ವಾಸ್ತು ಶಿಲ್ಪಕಲೆಗಳ ಬಗ್ಗೆ ವಿಶೇಷ ಉಪನ್ಯಾಸ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೋಟೆ, ದೇವಾಲಯ, ಬತೇರಿ, ದ್ವಾರಬಾಗಿಲುಗಳು, ಚಂದ್ರವಳ್ಳಿ, ಸ್ಮಾರಕ, ಕಟ್ಟಡಗಳು ಭಾವೈಕ್ಯದ ಪ್ರತೀಕವಾಗಿದೆ. ಇತಿಹಾಸ ನಮ್ಮನ್ನು ಸುಸಂಸ್ಕೃತರನ್ನಾಗಿ ಮಾಡುತ್ತದೆ. ನೆನಪುಗಳು ನಮಗೆ ದಾರಿದೀಪ ಎಂದು ಹೇಳಿದರು.ಎಸ್‌ಜೆಎಂ ಮಹಾವಿದ್ಯಾಲಯದ ಪ್ರಾಂಶುಪಾಲ ಎಂ. ಬಸವರಾಜ್ ಹಾಜರಿದ್ದರು.

ಇದೇ ಸಂದರ್ಭದಲ್ಲಿ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಎಸ್‌ಜೆಎಂ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಬಿ. ಪ್ರೀತಿ, ದ್ವಿತೀಯ ಸ್ಥಾನ ಪಡೆದ ಸರ್ಕಾರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಶಿವರಾಜ್ ನಾಯ್ಕ ಹಾಗೂ ತೃತೀಯ ಸ್ಥಾನ ಪಡೆದ ಸಿರಿಗೆರೆಯ ಎಂ.ಬಿ.ಆರ್. ಕಾಲೇಜಿನ ವಿದ್ಯಾರ್ಥಿನಿ ಬಿ.ಜಿ. ರೇಖಾ ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಪರಂಪರೆ ಕೂಟದ ಸಂಚಾಲಕ ಪ್ರೊ.ಬಿ.ಎಸ್. ಉಮಾಮಹೇಶ್ವರ್ ಅವರು ಪ್ರಾಚೀನ ಇತಿಹಾಸ ಹಾಗೂ ಪರಂಪರೆಯ ಬಗ್ಗೆ ತಿಳಿಸಿದರು. ಪರಂಪರೆ ಕೂಟದ ಕಾರ್ಯದರ್ಶಿ ಡಾ.ಜಿ.ಇ. ವಿಜಯಕುಮಾರ್ ಸ್ವಾಗತಿಸಿದರು. ಶ್ರೀನಿವಾಸರೆಡ್ಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.