ADVERTISEMENT

ಹಂಪನೂರು ರಂಗನಾಥಸ್ವಾಮಿ ರಥೋತ್ಸವ

ದೇವಿಗೆ ವಿಶೇಷ ಪೂಜೆ, ತೇರು ಎಳೆದು ಸಂಭ್ರಮಿಸಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2014, 6:00 IST
Last Updated 12 ಮಾರ್ಚ್ 2014, 6:00 IST

ಭರಮಸಾಗರ: ಸಮೀಪದ ಹಂಪನೂರು ಗ್ರಾಮದಲ್ಲಿ ಮಂಗಳವಾರ ಮುಂಜಾನೆ 4ಕ್ಕೆ ರಂಗನಾಥಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.

ದೇವರಿಗೆ ವಿಶೇಷ ಪೂಜೆಗಳು ಜರುಗಿದ ಬಳಿಕ ಅಲಂಕೃತ ದೇವರ ಉತ್ಸವ ಮೂರ್ತಿಯನ್ನು ತೇರಿನಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ದೇವರಧ್ವಜ, ಹೂವಿನ ಹಾರ ಮೊದಲಾದ ಧಾರ್ಮಿಕ ವಸ್ತುಗಳ ಹರಾಜು ನಡೆಸಲಾಯಿತು.

ಸಂಪ್ರದಾಯದಂತೆ ನೀರ್ಥಡಿ ಗ್ರಾಮದಿಂದ ನೆಟ್‌ಗಲ್ಲಮ್ಮ, ಎಮ್ಮೆಹಟ್ಟಿಯಿಂದ ಚೌಡಮ್ಮ, ಮಂಡ್ಲೂರು ಗ್ರಾಮದಿಂದ ಗಾಳಿಮಾರಮ್ಮ ದೇವಿಯರ ಉತ್ಸವ ಮೂರ್ತಿಗಳನ್ನು ಕರೆತಂದು ಪೂಜೆ ಸಲ್ಲಿಸಿದ ಬಳಿಕ ಗ್ರಾಮದ ರಾಮೇಶ್ವರ ದೇವರ ಉತ್ಸವ ಮೂರ್ತಿ ನೇತೃತ್ವದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಗ್ರಾಮದ ಆಚೆ ಇರುವ ಬನ್ನಿಮಂಟಪದವರೆಗೆ ತೇರನ್ನು ಎಳೆದೊಯ್ದು ಪೂಜೆ ಸಲ್ಲಿಸಿ ಮರಳಿ ದೇವಸ್ಥಾನದ ಬಳಿ ಕರೆತರಲಾಯಿತು. ರಥೋತ್ಸವಕ್ಕೆ ಹಲವು ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.