ADVERTISEMENT

ಮಹಾಘಟ ಬಂಧನದ ಅನೇಕರು ಭ್ರಷ್ಟರು

ಕರ್ನಾಟಕ ಲೋಕಸಭಾ ಸಹ ಉಸ್ತುವಾರಿ ಕಿರಣ್ ಮಹೇಶ್ವರಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2019, 9:03 IST
Last Updated 15 ಫೆಬ್ರುವರಿ 2019, 9:03 IST
ಕಿರಣ್ ಮಹೇಶ್ವರಿ.
ಕಿರಣ್ ಮಹೇಶ್ವರಿ.   

ಚಿತ್ರದುರ್ಗ: ಮಹಾಘಟ ಬಂಧನದ ಅನೇಕರು ಭ್ರಷ್ಟರು. ಅದಕ್ಕಾಗಿ ಅವರ ವಿರುದ್ಧ ಪ್ರಕರಣಗಳು ದಾಖಲಾಗುತ್ತಿದ್ದು, ತನಿಖೆ ನಡೆಯುತ್ತಿದೆ ಎಂದು ರಾಜಸ್ಥಾನದ ಉದಯಪುರ ಕ್ಷೇತ್ರದ ಶಾಸಕಿ, ಕರ್ನಾಟಕ ಲೋಕಸಭಾ ಸಹ ಉಸ್ತುವಾರಿ ಕಿರಣ್ ಮಹೇಶ್ವರಿ ತಿಳಿಸಿದರು.

ಮಹಾಘಟ ಬಂಧನದ ಮುಖಂಡರಾದ ಅಖಿಲೇಶ್ ಯಾದವ್, ಮಮತಾ ಬ್ಯಾನರ್ಜಿ ವಿರುದ್ಧ ತನಿಖಾ ತಂಡಗಳು ವಿಚಾರಣೆ ನಡೆಸಲು ಮುಂದಾಗಿವೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

ದೇಶ, ರಾಜ್ಯಕ್ಕಿಂತಲೂ ಸ್ವಾರ್ಥವೇ ತುಂಬಿಕೊಂಡಿರುವ ಕಾರಣ ಸಂಪತ್ತನ್ನು ದೋಚಿದ್ದಾರೆ. ಕುಟುಂಬ ರಾಜಕಾರಣಕ್ಕೆ ಮಹತ್ವ ನೀಡಿರುವ ಕಾರಣ ಬಹುತೇಕ ಅಂಥವರೇ ಜತೆಯಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

ADVERTISEMENT

ಪ್ರಧಾನಿ ಮೋದಿ ಅವರನ್ನು ಸಮರ್ಥವಾಗಿ ಎದುರಿಸುವಂಥ ನಾಯಕತ್ವ ಯಾವ ಪಕ್ಷಗಳಲ್ಲೂ ಇಲ್ಲ. ಅವರಿಂದ ರಾಜಕೀಯದಲ್ಲಿ ಉಳಿಗಾಲವಿಲ್ಲ ಎಂಬ ಕಾರಣಕ್ಕಾಗಿ ಮಹಾಘಟ ಬಂಧನದ ಹೆಸರಿನಲ್ಲಿ ಅನೇಕರು ಒಂದಾಗಿದ್ದಾರೆ. ಇದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಖಂಡಿತ ಸಫಲತೆ ಕಾಣುವುದಿಲ್ಲ. ದೇಶದ ಜನರ ಆಶೀರ್ವಾದ ಮೋದಿ ಅವರ ಮೇಲಿದ್ದು, ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.