ADVERTISEMENT

17ರಿಂದ ವೀರಭದ್ರಸ್ವಾಮಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 6:50 IST
Last Updated 15 ಮಾರ್ಚ್ 2011, 6:50 IST

ಹಿರಿಯೂರು: ಐತಿಹಾಸಿಕ ಹಿನ್ನೆಲೆ ಇರುವ ನಗರದ ವೀರಭದ್ರಸ್ವಾಮಿ ಹಾಗೂ ಭದ್ರಕಾಳೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವ ಮಾರ್ಚ್ 17 ರಿಂದ 21ರವರೆಗೆ ನಡೆಯಲಿದೆ ಎಂದು ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ.

ಮಾರ್ಚ್ 17 ರಂದು ರಾತ್ರಿ 8ಕ್ಕೆ ಮಹಾರುದ್ರಾಭಿಷೇಕ, 10ಕ್ಕೆ ಕಂಕಣ ಕಲ್ಯಾಣೋತ್ಸವ, ಮಾ. 18 ರಂದು ಬೆಳಿಗ್ಗೆ 8ರಿಂದ 10.30ರವರೆಗೆ ಸ್ವಾಮಿಗೆ ಹಾಗೂ ಅಮ್ಮನವರಿಗೆ ರುದ್ರಾಭಿಷೇಕ, ಸಂಜೆ 7ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ಮಾರ್ಚ್ 19ರಂದು ಸಂಜೆ 4ಕ್ಕೆ ನಗರದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯಗಳೊಂದಿಗೆ ದೊಡ್ಡ ಉತ್ಸವ, ರಾತ್ರಿ ಗರುಡಗಂಬದ ಮೇಲೆ ದೀಪೋತ್ಸವ, ಸುಮಂಗಲಿಯರಿಂದ ಅಕ್ಕಿ ತಂಬಿಟ್ಟಿನ ಆರತಿ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಮಾರ್ಚ್ 20ರಂದು ಬೆಳಗಿನ ಜಾವ 3ರಿಂದ 4.30ಕ್ಕೆ ಗುಗ್ಗಳೋತ್ಸವ, ಬೆಳಗಿನ ಬ್ರಾಹ್ಮೀ ಮುಹೂರ್ತದಲ್ಲಿ ಗುಗ್ಗಳೋತ್ಸವ, ಮಧ್ಯಾಹ್ನ 1.45ಕ್ಕೆ ರಥೋತ್ಸವ, ಸಂಜೆ 7.30ಕ್ಕೆ ಓಕಳಿ ಪಾರ್ವಟೋತ್ಸವ. ಮಾರ್ಚ್ 21ರಂದು ಸಂಜೆ 7.30ಕ್ಕೆ ಕಂಕಣ ವಿಸರ್ಜನೆ, ಸ್ವಾಮಿಗೆ ಹಾಗೂ ಅಮ್ಮನವರಿಗೆ ಅಭಿಷೇಕ, ಅರ್ಚನೆ, ಮಹಾ ಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯವರು ತಿಳಿಸಿದ್ದಾರೆ.

22 ರಂದು ಗಣಪತಿ ಪೂಜೆ
ನಗರದ ಕಿತ್ತೂರು ಚನ್ನಮ್ಮ ವೃತ್ತದಲ್ಲಿರುವ ಗಣಪತಿ ದೇಗುಲದಲ್ಲಿ ಮಾರ್ಚ್ 22 ರಂದು ಬೆಳಿಗ್ಗೆ 10.30 ಕ್ಕೆ 14ನೇ ವರ್ಷದ ಸಂಕಷ್ಟಹರ ಗಣಪತಿ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅರ್ಚಕ ವೀರಭದ್ರಾಚಾರ್ಯ ತಿಳಿಸಿದ್ದಾರೆ.

ವರುಣನ ಕೃಪೆಗಾಗಿ ಗಂಗಾಪೂಜೆ, ಉದ್ಯಾಪನೆ, ಪೂಜಾ ಕಾರ್ಯಕ್ರಮದ ಅಂಗವಾಗಿ 108 ಮೋದಕ, ಪುಣ್ಯಾಹ, ನವಗ್ರಹ ಶಾಂತಿ, ಪಂಚಕಲಶ ಸ್ಥಾಪನೆ, ನಾಂದಿ ಪೂಜೆ, ಹವನ, ಹೋಮ, ಕಥಾಶ್ರವಣ, ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮ ಇದೆ ಎಂದು ಅವರು ಹೇಳಿದ್ದಾರೆ.ಸಂಕಷ್ಟಹರ ಗಣೇಶ ಚತುರ್ಥಿ ಪೂಜೆ ಮಾಡಿಸಬಯಸುವ ಭಕ್ತರು ಮೊಬೈಲ್: 90192 30992 ಗೆ ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.