ADVERTISEMENT

‘ಬಯಲಸೀಮೆಯ ದೊಡ್ಡಾಟದ ಪುನರುತ್ಥಾನ’

​ಪ್ರಜಾವಾಣಿ ವಾರ್ತೆ
Published 14 ಜನವರಿ 2018, 9:19 IST
Last Updated 14 ಜನವರಿ 2018, 9:19 IST

ಹೊಸದುರ್ಗ: ಬಯಲುಸೀಮೆಯ ಮುಖ್ಯ ಕಲೆಗಳಲ್ಲಿ ದೊಡ್ಡಾಟವೂ ಒಂದು ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಎಸ್.ಎಸ್.ರಂಗಮಂದಿರದಲ್ಲಿ ಗುರುವಾರ ನಡೆದ ಶಿವಕುಮಾರ ರಂಗ ಪ್ರಯೋಗಶಾಲೆ ಮತ್ತು ಬೆಂಗಳೂರಿನ ನಾಗಾರ್ಜುನ ವಿದ್ಯಾಸಂಸ್ಥೆಯ ಸಹಯೋಗದೊಂದಿಗೆ  ನಡೆದ ದೊಡ್ಡಾಟ ಕಾರ್ಯಾಗಾರದ ಸಮಾರೋಪ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದರು.

ಕಲಾವಿದರು ಪ್ರದರ್ಶಿಸಿದ ದೊಡ್ಡಾಟ ಕಂಡು ಮನಸ್ಸು ಬಾಲ್ಯದೆಡೆಗೆ ಓಡುತ್ತಿತ್ತು. ಈ ಹಿಂದೆ ಹಳ್ಳಿಗಳಲ್ಲಿ ಬೇಸಿಗೆ ಬಂತೆಂದರೆ ದೊಡ್ಡಾಟದ ತಂಡಗಳು ಹಳ್ಳಿ-, ಹಳ್ಳಿಗಳಲ್ಲಿ ಪ್ರದರ್ಶನವಾಗುತ್ತಿದ್ದವು. ಅನೇಕ ಕಡೆ ಹಳ್ಳಿಯ ಯುವಕರೇ ಸೇರಿ ಪ್ರಸಂಗಗಳನ್ನು ಆಡುವುದಿತ್ತು. ಇಂಥ ಅನೇಕ ದೊಡ್ಡಾಟಗಳನ್ನು ನೋಡುತ್ತಿದ್ದವು. ಕಥಾ ಪ್ರಸಂಗಗಳು ಕೇವಲ ಮನೋರಂಜನೆಯನ್ನು ನೀಡದೇ ನೀತಿಯನ್ನೂ ಹೇಳುತ್ತಿದ್ದವು ಎಂದರು.

ಆಧುನಿಕ ಟಿ. ವಿ ಮಾಧ್ಯಮದ ಭರಾಟೆಯಲ್ಲಿ ಈ ದೊಡ್ಡಾಟ ಕಲೆ ನಶಿಸುತ್ತಿದೆ. ಇಂಥ ಸಂದರ್ಭದಲ್ಲಿ ಕಾಲೇಜು ಓದುತ್ತಿರುವ ಯುವಕ, ಯುವತಿಯರಿಗಾಗಿ ಈ ಕಾರ್ಯಾಗಾರ ಏರ್ಪಾಡಾಗಿರುವುದು ಸಂತೋಷ ತಂದಿದೆ. ಕೇವಲ ಐದು ದಿನಗಳಲ್ಲಿ ದೊಡ್ಡಾಟ ಕಲಿತು ಪ್ರದರ್ಶನ ನೀಡಿದ್ದು ಮೆಚ್ಚುವಂತಹದ್ದು. ಇಂಥ ಪ್ರಯತ್ನದಿಂದ ಕಲೆಗಳ ಪುನರುತ್ಥಾನವಾಗುವುದರಲ್ಲಿ ಅನುಮಾನವಿಲ್ಲ. ಇಂಥ ಪ್ರಯೋಗಗಳಿಗೆ ಸಹಯೋಗ ಬಯಸಿ ಬರುವವರಿಗೆ ಸಂಸ್ಥೆ ನೆರವು ನೀಡುವುದು ಎಂದರು.

ADVERTISEMENT

ಶಿಬಿರಾರ್ಥಿಗಳು ಮತ್ತು ಪ್ರೇಕ್ಷಕರು ಅಭಿಪ್ರಾಯಗಳನ್ನು ಹಂಚಿಕೊಂಡರು.  ನಾಗಾರ್ಜುನ ವಿದ್ಯಾಸಂಸ್ಥೆ ನಿರ್ದೇಶಕ ಮನೋಹರ್, ರಂಗ ಶಾಲೆಯ ಪ್ರಾಚಾರ್ಯ ಜಗದೀಶ್ ಆರ್, ಶಿಬಿರದ ನಿರ್ದೇಶಕ ಪ್ರಮೋದ್ ಶಿಗ್ಗಾಂವ್ ಹಾಜರಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.