ADVERTISEMENT

ರಕ್ತದಲ್ಲಿ ಸಾವಿಗೆ ಕಾರಣ ಬರೆದು ಆತ್ಮಹತ್ಯೆಗೆ ಶರಣಾದ ಯುವಕ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 2:40 IST
Last Updated 17 ನವೆಂಬರ್ 2021, 2:40 IST

ಹಿರಿಯೂರು: ಗೋಡೆಯ ಮೇಲೆ ರಕ್ತದಲ್ಲಿ ಸಾವಿನ ಕಾರಣ ಬರೆದಿಟ್ಟು ವ್ಯಕ್ತಿಯೊಬ್ಬರು ಇಲ್ಲಿನ ಕೆಎಸ್ಆರ್‌ಟಿಸಿ ಎದುರಿನ ಅಯ್ಯಂಗಾರ್ ಬೇಕರಿಯ ಎರಡನೇ ಮಹಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಭೀಮಸಮುದ್ರದ ಬಳಿಯ ಬೊಮ್ಮೇನಹಳ್ಳಿಯ ಕೃಷ್ಣಮೂರ್ತಿ ಎಂಬುವವರ ಮಗ ವೆಂಕಟೇಶ (35) ಮೃತ ವ್ಯಕ್ತಿ. ‘ಪೊಲೀಸರು ನನ್ನ ದೂರನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಮದುವೆ ನನ್ನ ಸಾವಿಗೆ ಕಾರಣ. ಇದೆಲ್ಲ ಹರಳಯ್ಯ ಮಠದ ಜಯಣ್ಣ ಎಂಬುವವರಿಗೆ ಗೊತ್ತು’ ಎಂಬಿತ್ಯಾದಿ ಸಾಲುಗಳನ್ನು ರಕ್ತದಲ್ಲಿ ಗೋಡೆಯ ಮೇಲೆ ಬರೆದಿದ್ದಾರೆ.

‘ವೆಂಕಟೇಶ್ 25 ವರ್ಷಗಳಿಂದ ಚಿತ್ರದುರ್ಗದ ಗ್ಯಾರೇಜ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಯಾವಾಗಲೋ ಒಮ್ಮೆ ಮನೆಗೆ ಬರುತ್ತಿದ್ದರು. ಕುಡಿತದ ಚಟವಿದ್ದರಿಂದ ಎಲ್ಲೆಂದರಲ್ಲಿ ಮಲಗುತ್ತಿದ್ದ. ರಾತ್ರಿ ವೇಳೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ಮಲಗುತ್ತಿದ್ದ. ಪೊಲೀಸರು ಅಲ್ಲಿಂದ ಗದರಿಸಿ ಓಡಿಸಿರಬಹುದು. ಜಯಣ್ಣ ಎಂಬ ವ್ಯಕ್ತಿ ಯಾರೆಂದು ತಿಳಿದಿಲ್ಲ. ಕುಡುಕ ಎಂದು ಯಾರೂ ಹೆಣ್ಣು ಕೊಡಲು ಮುಂದೆ ಬಂದಿರಲಿಲ್ಲ. ದುಡಿದ ಹಣದಲ್ಲಿ ಎಂದೂ ಮನೆಗೆ ಒಂದು ಪೈಸೆ ಕೊಟ್ಟಿಲ್ಲ’ ಎಂದು ತಂದೆ ಕೃಷ್ಣಮೂರ್ತಿ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಡಿವೈಎಸ್ಪಿ ರೋಷನ್ ಜಮೀರ್, ಸಿಪಿಐಗಳಾದ ರಾಘವೇಂದ್ರ, ಶಿವಕುಮಾರ್ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.