ಚಳ್ಳಕೆರೆ: ಕೃಷಿ ಪರಿಕರ ಹಾಗೂ ರಸಗೊಬ್ಬರ ಮಾರಾಟದಲ್ಲಿ ರೈತರಿಗೆ ಯಾವುದೇ ರೀತಿ ವಂಚನೆ ಮಾಡಬಾರದು ಎಂದು ಜಿಲ್ಲಾ ಕೃಷಿ ನಿರ್ದೇಶಕ ಪ್ರಭಾಕರ್ ಸಲಹೆ ನೀಡಿದರು.
ನಗರದ ಕೃಷಿ ಇಲಾಖೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೃಷಿ ಪರಿಕರ ಮತ್ತು ರಸಗೊಬ್ಬರ ಮಾರಾಟಗಾರರ ಸಭೆಯಲ್ಲಿ ಅವರು ಮಾತನಾಡಿದರು.
ವರ್ತಕರು, ಮಾರಾಟ ಮಾಡುವ ಕೀಟನಾಶಕ, ರಸಗೊಬ್ಬರ ಹಾಗೂ ಬಿತ್ತನೆ ಬೀಜದ ದರ ಪಟ್ಟಿಯ ನಾಮಫಲಕವನ್ನು ಅಂಗಡಿ ಮುಂದೆ ಪ್ರದರ್ಶಿಸಬೇಕು ಎಂದು ಹೇಳಿದರು.
‘ಜಿಲ್ಲೆಯಲ್ಲಿ ಅತೀ ಕಡಿಮೆ ಪ್ರಮಾಣದಲ್ಲಿ ಮಳೆಬೀಳುವ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ಪ್ರದೇಶದಲ್ಲಿ ಬಿದ್ದ ಮಳೆನೀರನ್ನು ಸಂರಕ್ಷಣೆ ಮಾಡುವುದು ಸವಾಲಾಗಿದೆ’ ಎಂದು ಜಿಲ್ಲಾ ಕೃಷಿ ಜಾಗೃತ ದಳದ ಸಹಾಯಕ ನಿರ್ದೇಶಕ ಉಲ್ಪನ್‍ಜೈಬಾ ಹೇಳಿದರು.
ಜಾಗೃತ ದಳದ ನಿರ್ದೇಶಕ ಮಲ್ಲನಗೌಡ, ಕೃಷಿ ಸಹಾಯಕ ನಿರ್ದೇಶಕ ಅಶೋಕಕುಮಾರ್, ಕೃಷಿ ಪರಿಕರ ಮಾರಾಟಗಾರರ ಸಂಘದ ತಾಲ್ಲೂಕು ಅಧ್ಯಕ್ಷ ಜಗದೀಶ್, ಉಪಾಧ್ಯಕ್ಷ ಮಂಜುನಾಥ್, ಕೃಷಿ ತಾಂತ್ರಿಕಾಧಿಕಾರಿ ಮೇಘನಾ, ಗುರುನಂದನಾ, ಮಂಜುನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.