ಚಿತ್ರದುರ್ಗ: ಕಸಬಾ ಹೋಬಳಿ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಸೀಬಾರ-ಗುತ್ತಿನಾಡು ವಿಶ್ವಮಾನವ ವಸತಿ ಪ್ರೌಢಶಾಲೆ ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ವೈಯಕ್ತಿಕ ಆಟಗಳಲ್ಲಿ ಕೆ. ಕಿರಣ್ 100 ಮೀ. ಓಟ, ಶಾಟ್‌ಪಟ್, ಎಚ್. ರಾಕೇಶ್ 110 ಮೀ. ಹರ್ಡಲ್ಸ್, ಟ್ರಿಪಲ್ ಜಂಪ್, ಆರ್. ಸಂದೀಪ್ 400 ಮೀ. ಓಟ, ಕೆ. ಮಂಜುನಾಥ್ 200 ಮೀ. ಓಟ ಪ್ರಥಮ, ಲಾಂಗ್ ಜಂಪ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಸಿ.ತಿಪ್ಪೇಸ್ವಾಮಿ 400 ಮೀ. ಹರ್ಡಲ್ಸ್, ಆರ್.ಎ. ಜೀವನ್ ಶಾಟ್‌ಪಟ್, ಕೆ.ವಿ. ಮನೋಜ್ ಲಾಂಗ್ ಜಂಪ್‌ನಲ್ಲಿ ಪ್ರಥಮ, ಡಿಸ್ಕಸ್ ಥ್ರೋದಲ್ಲಿ ದ್ವಿತೀಯ ಸ್ಥಾನ, ನಂದನ್ ಕುಮಾರ್ ಹೈ ಜಂಪ್–ಪ್ರಥಮ, ಶಾಟ್‌ಪಟ್–ದ್ವಿತೀಯ, ಎಂ.ಎಸ್. ಶ್ರಾವಣಿ 1,500 ಮೀ. ಓಟ, ಯು. ಲಾವಣ್ಯ 800 ಮೀ. ಓಟ, ಎನ್. ಬಿಂದುಶ್ರೀ 400 ಮೀ. ಓಟ ಮತ್ತು 110 ಮೀ. ಹರ್ಡಲ್ಸ್, ಜಿ.ಕೆ.ಪೂರ್ಣಿಮಾ ಡಿಸ್ಕಸ್ ಥ್ರೋ, ಆರ್. ಅನುಶ್ರೀ, ಜಾವೆಲಿನ್ ಥ್ರೋದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಗುಂಪು ಆಟಗಳಲ್ಲಿ ಬಾಲಕರ ವಿಭಾಗದಲ್ಲಿ 4x100 ಮೀ. ರಿಲೇ, 4x400 ಮೀ. ರಿಲೇ, ಕೊಕ್ಕೊ, ಬಾಲ್ ಬ್ಯಾಡ್‌ಮಿಂಟನ್ ಹಾಗೂ ಷಟಲ್ ಬ್ಯಾಡ್‌ಮಿಂಟನ್‌ನಲ್ಲಿ ಪ್ರಥಮ, ಥ್ರೋಬಾಲ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದೆ.
ಬಾಲಕಿಯರ ವಿಭಾಗದಲ್ಲಿ ಬ್ಯಾಡ್‌ಮಿಂಟನ್, 4x100 ಮೀ. ರಿಲೇ, 4x400 ಮೀ. ರಿಲೇ ಪ್ರಥಮ, ಕೊಕ್ಕೊ ಹಾಗೂ ಥ್ರೋಬಾಲ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಎನ್. ಬಿಂದುಶ್ರೀ, ರಾಕೇಶ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಕಾರ್ಯದರ್ಶಿ ಎಂ. ನೀಲಕಂಠದೇವರು, ಮುಖ್ಯಶಿಕ್ಷಕರಾದ ಜೆ.ಆರ್. ಚನ್ನಬಸಪ್ಪ, ಬಿ.ಜಿ. ಶಿವರುದ್ರಯ್ಯ, ಶಿಕ್ಷಣ ಸಂಯೋಜಕರಾದ ದೀಪಾ, ವೇದಾವತಿ, ದೈಹಿಕ ಶಿಕ್ಷಣ ಶಿಕ್ಷಕರಾದ ಎಂ.ಪಿ. ಪಾಪಣ್ಣ, ಐ. ಶಶಿಧರ, ಎಂ. ಮಂಜುನಾಥ್, ಬಿ. ಪಾಪಣ್ಣ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.