ಹಿರಿಯೂರು: ತಾಲ್ಲೂಕಿನ ಯಲ್ಲದಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಗೊಲ್ಲರಹಟ್ಟಿ ಸಮೀಪದ ಪರಿಶಿಷ್ಟ ಪಂಗಡದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮುಂಬಾಗದಲ್ಲಿ ಬಸ್ ನಿಲ್ದಾಣದ ಕಾಮಗಾರಿಗೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಭೂಮಿ ಪೂಜೆ ನೆರವೇರಿಸಿದರು.
‘ನಗರದ ಶಾಲಾ– ಕಾಲೇಜುಗಳಿಗೆ ಹೋಗಿ ಬರಲು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸೂಕ್ತ ಬಸ್ ಸೌಲಭ್ಯ ಇಲ್ಲದಿರುವುದು ಗಮನದಲ್ಲಿದೆ. ಆದಷ್ಟು ಬೇಗ ಹಿರಿಯೂರು ನಗರದ ಹುಳಿಯಾರು ರಸ್ತೆಯಲ್ಲಿ ಮುಕ್ತಾಯ ಹಂತದಲ್ಲಿರುವ ಸಾರಿಗೆ ಸಂಸ್ಥೆ ಡಿಪೊ ಆರಂಭಿಸಿ ಸಂಚಾರದ ಸಮಸ್ಯೆ ಪರಿಹರಿಸುತ್ತೇವೆ. ವಿದ್ಯಾರ್ಥಿಗಳು ಹೆಚ್ಚಿನ ಗಮನವನ್ನು ತಮ್ಮ ಓದಿನ ಕಡೆ ಕೊಡಬೇಕು. ಶಿಕ್ಷಣದಿಂದ ಮಾತ್ರ ಸಮಸ್ಯೆಗಳಿಗೆ ಪರಿಹಾರ ಎಂಬ ಮಾತನ್ನು ಸದಾ ನೆನಪಿನಲ್ಲಿಡಬೇಕು’ ಎಂದು ಸಚಿವರು ಹೇಳಿದರು.
ಕಾರ್ಯಕ್ರಮದಲ್ಲಿ ನಗರ ಮತ್ತು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಈರಲಿಂಗೇಗೌಡ, ಮುಖಂಡರಾದ ಕಣುಮಯ್ಯ, ಆಯಿಲ್ ಮಂಜುನಾಥ್, ಈ. ಮಂಜುನಾಥ್, ಕಂದಿಕೆರೆ ಸುರೇಶ್ ಬಾಬು, ಪಿಲ್ಲಾಜನಹಳ್ಳಿ ನಿಂಗಣ್ಣ, ದಿವಾಕರ ರೆಡ್ಡಿ, ಕೆ.ಕೆ. ಹಟ್ಟಿ ಚಂದ್ರಣ್ಣ, ಹಂದಿಗನಡು ಶಿವಣ್ಣ, ಯಲ್ಲದಕೆರೆ ಕಣ್ಣುಮಯ್ಯ, ಲೇಪಾಕ್ಷಿ, ಸುಬ್ಬಣ್ಣ, ರಾಮಜ್ಜ, ರಾಜಣ್ಣ, ಕರಿಯಪ್ಪ, ಜೈರಾಮ್, ಗುರುಪ್ರಸಾದ್, ವಿ. ಶಿವಕುಮಾರ್, ಗಿರೀಶ್, ಜ್ಞಾನೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.