ಚಳ್ಳಕೆರೆ: ಮೂರು ತಿಂಗಳ ಹಿಂದೆ ತಳಕು ಹೋಬಳಿ ವ್ಯಾಪ್ತಿಯ ಹಿರೇಹಳ್ಳಿ ಗ್ರಾಮದ ಹೊರ ವಲಯದ ಮನೆಯೊಂದರಲ್ಲಿ ನಡೆದಿದ್ದ ಕಳವು ಪ್ರಕರಣವನ್ನು ಭೇದಿಸಿರುವ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ರುದ್ರಂಪೇಟೆಯ ನೀಲಂ ಶ್ರೀರಾಮ್ ವಿಜಯ್ ಹಾಗೂ ವಿಜಯವಾಡದ ರಂಗುಲಪ್ರಸಾದ್ ಬಂಧಿತರು. ಕಳವು ಪ್ರಕರಣದ ನೇತೃತ್ವವಹಿಸಿದ್ದ ಪಾಲವೆಂಕಟೇಶ್ ರಾವ್ ತಲೆಮರೆಸಿಕೊಂಡಿದ್ದಾನೆ.
ಹಿರೇಹಳ್ಳಿ ಗ್ರಾಮದ ಹೊರ ವಲಯದ ಮನೆಯೊಂದರಲ್ಲಿ ಜೂನ್ 9ರದು ಮನೆ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಚಾಕು ತೋರಿಸಿ ಮಾಲೀಕಕನನ್ನು ಹಗ್ಗದಿಂದ ಕಟ್ಟಿ ಹಾಕಿ ₹ 6.52 ಲಕ್ಷ ರೂ ಮೌಲ್ಯದ /// ಹೆಣ್ಣುಮಗಳ ಮೈಮೇಲಿನ ಆಭರಣ ದೋಚಿ ಪರಾರಿಯಾಗಿದ್ದರು.
ಈ ಬಗ್ಗೆ ತಳಕು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದು, ಅವರ ಬಳಿ ಇದ್ದ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ್ ಬಂಡಾರು ಅವರ ಮಾರ್ಗದರ್ಶನದಲ್ಲಿ ಅಧೀಕ್ಷಕ ಕುಮಾರಸ್ವಾಮಿ, ಡಿವೈಎಸ್ಪಿ ಟಿ.ಬಿ.ರಾಜಣ್ಣ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ತಳಕು ಠಾಣೆ ಪಿಎಸ್‌ಐ ಲೋಕೇಶ್, ಶಿವಕುಮಾರ್ ಕಾರ್ಯಾಚರಣೆಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.