ADVERTISEMENT

ಕ್ಷೇಮಂಕರಿ ಸತ್ಸಂಗ ಕೇಂದ್ರದ ಸದಸ್ಯರಿಂದ ಭಜನೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2025, 14:21 IST
Last Updated 5 ಮಾರ್ಚ್ 2025, 14:21 IST
ಚಳ್ಳಕೆರೆಯ ಶಾರದ ಆಶ್ರಮದಲ್ಲಿ ಮಂಗಳವಾರ ಭಜನಾ ಕಾರ್ಯಕ್ರಮ ನಡೆಯಿತು
ಚಳ್ಳಕೆರೆಯ ಶಾರದ ಆಶ್ರಮದಲ್ಲಿ ಮಂಗಳವಾರ ಭಜನಾ ಕಾರ್ಯಕ್ರಮ ನಡೆಯಿತು   

ಚಳ್ಳಕೆರೆ: ರಾಮಕೃಷ್ಣ ಪರಮಹಂಸರ 190ನೇ ಜಯಂತ್ಯುತ್ಸವದ ಪ್ರಯುಕ್ತ ಬೆಂಗಳೂರಿನ ಜಯಂತಿ ಸುರೇಶ್ ನೇತೃತ್ವದ ಕ್ಷೇಮಂಕರಿ ಸತ್ಸಂಗ ಕೇಂದ್ರದ ಸದಸ್ಯರು ಇಲ್ಲಿನ ಶಾರದ ಆಶ್ರಮದಲ್ಲಿ ಮಂಗಳವಾರ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.

ಶಾರದ ಆಶ್ರಮದ ವ್ಯವಸ್ಥಾಪಕಿ ಮಾತಾಜಿ ತ್ಯಾಗಮಯಿ ಅವರು ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸರ ಕುರಿತು ಪ್ರವಚನ ನೀಡಿದರು.

ಸತ್ಸಂಗ ಕೇಂದ್ರದ ಸದಸ್ಯರಾದ ಪದ್ಮಾ ಆನಂದ, ನಳಿನಿ, ಭಾಗ್ಯಲಕ್ಷ್ಮಿ, ಸುಮಾ, ಕವಿತಾ, ಸವಿತಾ, ಪ್ರಭಾವತಿ, ವಿನೋದಮ್ಮ, ನಾಗವೇಣಿ, ವನಜಾಕ್ಷಿ, ಯಶೋಧ, ಸುಮನಾ, ಕಲ್ಪನಾ, ಸಮಾಜ ಸೇವಕ ಎಚ್.ಎಸ್.ಸೈಯದ್, ರವಿಚಂದ್ರ, ಶ್ರೀನಿವಾಸ್, ಸತ್ಯನಾರಾಯಣ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.