ADVERTISEMENT

ದೇಶಿ ತಳಿ ಹಸುಗಳಿಗೆ ಮೇವು ಉಚಿತ ಪೂರೈಕೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 15:19 IST
Last Updated 4 ಜೂನ್ 2025, 15:19 IST
ಚಳ್ಳಕೆರೆ ತಾಲ್ಲೂಕಿನ ಕಾಲುವೆಹಳ್ಳಿ ಗ್ರಾಮದಲ್ಲಿ ದೇಶಿ ತಳಿಯ ಹಸುಗಳಿಗೆ ಒಂದು ಲೋಡ್ ಮೇವನ್ನು ಉಚಿತವಾಗಿ ಪೂರೈಸಲಾಯಿತು
ಚಳ್ಳಕೆರೆ ತಾಲ್ಲೂಕಿನ ಕಾಲುವೆಹಳ್ಳಿ ಗ್ರಾಮದಲ್ಲಿ ದೇಶಿ ತಳಿಯ ಹಸುಗಳಿಗೆ ಒಂದು ಲೋಡ್ ಮೇವನ್ನು ಉಚಿತವಾಗಿ ಪೂರೈಸಲಾಯಿತು   

ಚಳ್ಳಕೆರೆ: ನಮ್ಮ ಪರಂಪರೆಯನ್ನು ಬಿಂಬಿಸುವ ದೇಶಿ ತಳಿಯ ಹಸುಗಳನ್ನು ಇತರರಿಗೆ ಪರಿಚಯಿಸುವ ಕೆಲಸ ಆಗಬೇಕು ಎಂದು ರೈತ ಮಹಿಳೆ ಪಾರ್ವತಮ್ಮ ಹೇಳಿದರು.

ತಾಲ್ಲೂಕಿನ ಕಾಲುವೆಹಳ್ಳಿ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ದೇಶಿ ತಳಿ ಹಸುಗಳಿಗೆ ಮೇವು ಉಚಿತ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಾಲು, ಮೊಸರು, ಬೆಣ್ಣೆ, ತುಪ್ಪ ಆರೋಗ್ಯ ವೃದ್ಧಿಸುತ್ತವೆ. ಸಂಘ-ಸಂಸ್ಥೆಗಳು ದೇಶಿ ತಳಿ ಹಸು ಸಾಕಣೆಗೆ ಹೆಚ್ಚು ಉತ್ತೇಜನ ನೀಡಬೇಕು ಎಂದರು.

ADVERTISEMENT

ದೇಶಿ ಹಸು ಸಾಕಲು ಮಹಿಳಾ ಸ್ವ ಸಹಾಯ ಸಂಘಗಳಿಗೆ ಹೆಚ್ಚಿನ ಆರ್ಥಿಕ ನೆರವು ಒದಗಿಸಬೇಕು ಎಂದುಆಂಜನೇಯ ಸ್ವಾಮಿ ಭಜನಾ ಮಂಡಳಿಯ ಬೋರಣ್ಣ ಪಶುಸಂಗೋಪನಾ ಅಧಿಕಾರಿಗಳಲ್ಲಿ ಮನವಿ ಮಾಡಿದರು.

ಸ್ವಯಂ ಸೇವಕಿ ಮಹೇಶ್ವರಿ ಮಾತನಾಡಿದರು. ಜ್ಯೋತಿ, ಸುಧಾ ಪ್ರಹ್ಲಾದ್, ಪದ್ಮ ನಾಗರಾಜ, ಅನಿತಾ, ನಾಗಶ್ರೀ ಅರುಣ, ವಿದ್ಯಾ, ಚಂದ್ರಕಲಾ, ಮೀರಾ, ಮಲ್ಲಿಕಾರ್ಜುನ, ಬ್ರಹ್ಮ, ಯತೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.