ADVERTISEMENT

ಚಳ್ಳಕೆರೆ: ಸಿಂಗರಿಸಿದ ಗಾಡಿಯಲ್ಲಿ ಮಕ್ಕಳ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 17 ಮೇ 2022, 4:29 IST
Last Updated 17 ಮೇ 2022, 4:29 IST
ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಗ್ರಾಮದಲ್ಲಿ ಶಾಲಾ ಮಕ್ಕಳನ್ನು ಗಾಡಿಯಲ್ಲಿ ಮೆರವಣಿಗೆ ನಡೆಸಲಾಯಿತು
ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಗ್ರಾಮದಲ್ಲಿ ಶಾಲಾ ಮಕ್ಕಳನ್ನು ಗಾಡಿಯಲ್ಲಿ ಮೆರವಣಿಗೆ ನಡೆಸಲಾಯಿತು   

ಚಳ್ಳಕೆರೆ: ತಾಲ್ಲೂಕಿನ ನನ್ನಿವಾಳ ಗ್ರಾಮದಲ್ಲಿ ಸೋಮವಾರ ಶಾಲೆ ಪ್ರಾರಂಭೋತ್ಸವ ಪ್ರಯುಕ್ತ ಗ್ರಾಮಸ್ಥರು ಎತ್ತುಗಳ ಕೊರಳಿಗೆ ಘಂಟೆ, ಹೂವಿನ ಹಾರ, ಕೋಡುಗಳಿಗೆ ಕೋಡಣಸು, ಗಗ್ರಿ, ಗೆಜ್ಜೆ, ಬಣ್ಣ ಬಣ್ಣದ ಕುಚ್ಚು, ಬಾಳೆಕಂದು, ಹೊಂಬಾಳೆಯಿಂದ ಜೋಡೆತ್ತಿನ ಗಾಡಿಯನ್ನು ಸಿಂಗರಿಸಿ ಮಕ್ಕಳ ಮೆರವಣಿಗೆ ಮಾಡಿದರು.

ಶಾಲಾ ಮಕ್ಕಳು ಸಾಂಪ್ರದಾಯಿಕ ಉಡುಗೆ ಧರಿಸಿ ಗಮನ ಸೆಳೆದರು.

ಶಾಸಕ ಟಿ.ರಘುಮೂರ್ತಿ,ತಹಶೀಲ್ದಾರ್ ಎನ್.ರಘುಮೂರ್ತಿ,ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಮಾರುತೇಶ್, ಗ್ರಾಮದ ಮುಖಂಡ ಚಿನ್ನಯ್ಯ, ಪಿಡಿಒ ಪಾಲಯ್ಯ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.