ಚಿಕ್ಕಜಾಜೂರು: ಬಿ.ದುರ್ಗ ಹೋಬಳಿ ಹಾಗೂ ಚಿಕ್ಕಜಾಜೂರು ವ್ಯಾಪ್ತಿಯಲ್ಲಿ ಬಸವೇಶ್ವರ ಜಯಂತಿ ಆಚರಿಸಲಾಯಿತು.
ಸಮೀಪದ ಟಿ. ತಿರುಮಲಾಪುರ ಗ್ರಾಮದಲ್ಲಿ ಸಂಭ್ರಮದಿಂದ ಬಸವ ಜಯಂತಿ ಆಚರಿಸಲಾಯಿತು. ಗ್ರಾಮಸ್ಥರೆಲ್ಲ ಸೇರಿ ಬಸವಣ್ಣನವರ ಭಾವಚಿತ್ರವನ್ನು ಅಲಂಕಾರ ಮಾಡಿದ ಜೀಪ್‌ನ ಮುಂಭಾಗದಲ್ಲಿರಿಸಿ, ವಾದ್ಯಗಳೊಂದಿಗೆ ಮೆರವಣಿಗೆ ನಡೆಸಿದರು.
ಗ್ರಾಮದ ನೂರಾರು ಯುವ ರೈತರು ಬೈಕ್‌ಗಳಲ್ಲಿ ಮಾವಿನಹಳ್ಳಿ ಬಸವೇಶವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಸಮೀಪದ ಬ್ರಹ್ಮಪುರದವರೆಗೆ ಬೈಕ್ ರ‍್ಯಾಲಿ ನಡೆಸಿದರು.
ಚಿಕ್ಕಜಾಜೂರು ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಬಸವ ಜಯಂತಿ ಅಂಗವಾಗಿ ಕೆಂಡಾರ್ಚನೆ, ಜಾನುವಾರುಗಳ ಮೆರವಣಿಗೆ ಹಾಗೂ ಮನೆಗಳಲ್ಲಿ ಬಸವೇಶ್ವರರ ಪ್ರತೀಕವಾದ ನಂದಿ ವಿಗ್ರಹಗಳ ಪೂಜೆಯನ್ನು ನಡೆಸಿ, ಸಿಹಿ ಅಡುಗೆ ತಯಾರಿಸಿ, ನೈವೇದ್ಯ ಮಾಡಿ ಬಸವನ (ಬಸವೇಶ್ವರ ಜಯಂತಿ) ಹಬ್ಬವನ್ನು ಆಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.