ADVERTISEMENT

ಕಿರಣ್‌, ಶುಭಂಗೆ ‘ಚಿನ್ಮೂಲಾದ್ರಿ ಕೇಸರಿ’

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 13:19 IST
Last Updated 16 ಅಕ್ಟೋಬರ್ 2021, 13:19 IST
ಚಿತ್ರದುರ್ಗ ಮುರುಘಾಮಠದ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ನಡೆದ ರಾಷ್ಟ್ರಮಟ್ಟದ ಜಯದೇವ ಜಂಗೀಕುಸ್ತಿಯಲ್ಲಿ ಕಿರಣ್‌ ಮತ್ತು ಶುಭಂ ಇಬ್ಬರು ಸಮಬಲದ ಹೋರಾಟದೊಂದಿಗೆ ‘ಚಿನ್ಮೂಲಾದ್ರಿ ಕೇಸರಿ’ ಪ್ರಶಸ್ತಿ ಮುಡಿಗೇರಿಸಿಕೊಂಡರು 
ಚಿತ್ರದುರ್ಗ ಮುರುಘಾಮಠದ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ನಡೆದ ರಾಷ್ಟ್ರಮಟ್ಟದ ಜಯದೇವ ಜಂಗೀಕುಸ್ತಿಯಲ್ಲಿ ಕಿರಣ್‌ ಮತ್ತು ಶುಭಂ ಇಬ್ಬರು ಸಮಬಲದ ಹೋರಾಟದೊಂದಿಗೆ ‘ಚಿನ್ಮೂಲಾದ್ರಿ ಕೇಸರಿ’ ಪ್ರಶಸ್ತಿ ಮುಡಿಗೇರಿಸಿಕೊಂಡರು    

ಚಿತ್ರದುರ್ಗ: ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಘಾಮಠದಲ್ಲಿ ಶನಿವಾರ ನಡೆದ ‘ರಾಷ್ಟ್ರಮಟ್ಟದ ಜಯದೇವ ಜಂಗೀಕುಸ್ತಿ’ಯಲ್ಲಿ ಭದ್ರಾವತಿಯ ಕಿರಣ್ ಹಾಗೂ ಕೊಲ್ಲಾಪುರದ ಶುಭಂ ಸಮಬಲದ ಹೋರಾಟ ನಡೆಸಿ ‘ಚಿನ್ಮೂಲಾದ್ರಿ ಕೇಸರಿ’ ಪ್ರಶಸ್ತಿ ಜಂಟಿಯಾಗಿ ಪಡೆದುಕೊಂಡರು.

ಪ್ರಶಸ್ತಿಯೂ ತಲಾ ₹ 20 ಸಾವಿರ ನಗದು, ಪ್ರಶಸ್ತಿ ಪತ್ರ, ಪದಕ ಹಾಗೂ ಬೆಳ್ಳಿ ಗದೆ ಒಳಗೊಂಡಿದೆ. ಕರ್ನಾಟಕದ ಕೇಸರಿ ಕಿರಣ್‌ ಮತ್ತು ಭಾರತ ಕೇಸರಿ ಖ್ಯಾತಿಯ ಶುಭಂ ನಡುವಣ ನಡೆದ ಕುಸ್ತಿ ಮದಗಜಗಳ ಕಾದಾಟದಂತಿತ್ತು. ಆಕರ್ಷಕ ಪಟ್ಟುಗಳು, ತಂತ್ರಗಳು, ಮೈನವರೇಳಿಸುವ ಚಟುವಟಿಕೆಗೆ ಪ್ರೇಕ್ಷಕರು ಮನಸೋತರು.

ಅಂತಿಮ ಹಂತದಲ್ಲಿ ಕುಸ್ತಿ ರೋಚಕ ಘಟ್ಟ ತಲುಪಿತು.ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲಿಸಿತು. ಹಲವು ಸುತ್ತುಗಳಲ್ಲಿ ನಡೆದ ಈ ಪಂದ್ಯದಲ್ಲಿ ಇಬ್ಬರು ಸಮಬಲದ ಹೋರಾಟ ನಡೆಸಿ ಜಂಟಿಯಾಗಿ ಜಯಶಾಲಿಯಾದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.