ADVERTISEMENT

ಹಿರಿಯೂರು ವಕೀಲೆ ಅಸಹಜ ಸಾವು: ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2025, 14:54 IST
Last Updated 11 ಫೆಬ್ರುವರಿ 2025, 14:54 IST
ಆಶಾರಾಣಿ
ಆಶಾರಾಣಿ   

ಹಿರಿಯೂರು: ನಗರದ ನ್ಯಾಯಾಲಯದ ವಕೀಲೆಯೊಬ್ಬರು ಅಸಹಜವಾಗಿ ಮೃತಪಟ್ಟಿರುವ ಘಟನೆ ಮಾರುತಿ ನಗರದಲ್ಲಿ ಸೋಮವಾರ ನಡೆದಿದೆ.

ಆಶಾರಾಣಿ (34) ಮೃತಪಟ್ಟವರು. 13 ವರ್ಷಗಳ ಹಿಂದೆ ಆಶಾರಾಣಿ ಮದುವೆಯನ್ನು ಆಂಧ್ರಪ್ರದೇಶದ ಕಲ್ಯಾಣದುರ್ಗ ತಾಲ್ಲೂಕಿನ ಕೃಷ್ಣಪ್ಪ ಅವರೊಂದಿಗೆ ಮಾಡಲಾಗಿತ್ತು. 8–9 ವರ್ಷಗಳ ಹಿಂದೆ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ನಗರದಲ್ಲಿ ವಕೀಲಿ ವೃತ್ತಿ ಮಾಡಿಕೊಂಡು ಮಗನೊಂದಿಗೆ ನೆಲೆಸಿದ್ದಳು. ಪತಿಯಿಂದ ದೂರವಾದ ನಂತರ ಕುಡಿತದ ಚಟಕ್ಕೆ ಬಿದ್ದಿದ್ದಳು. ಕುಡಿತ ಬಿಡುವಂತೆ ಹಲವು ಸಲ ಹೇಳಿದ್ದರೂ ಪ್ರಯೋಜನವಾಗಿರಲಿಲ್ಲ. ಮದ್ಯದಲ್ಲಿ ಏನನ್ನೋ ಬೆರೆಸಿಕೊಂಡು ಕುಡಿದು ಆಕೆ ಮೃತಪಟ್ಟಿರಬಹುದು. ಸಾವಿನ ಬಗ್ಗೆ ಸಂಶಯವಿದ್ದು, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಚಳ್ಳಕೆರೆ ತಾಲ್ಲೂಕಿನ ಥಳಕು ಗ್ರಾಮದ ಆಶಾರಾಣಿ ಅವರ ತಾಯಿ ಅನುಸೂಯಮ್ಮ ನಗರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ನಗರಠಾಣೆ ಎಸ್‌ಐ ಲಕ್ಷ್ಮಿನಾರಾಯಣಪ್ಪ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.