ADVERTISEMENT

ಚಿಕ್ಕಜಾಜೂರು: ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 17 ಮೇ 2025, 14:48 IST
Last Updated 17 ಮೇ 2025, 14:48 IST
ಚಿಕ್ಕಜಾಜೂರಿನಲ್ಲಿ ಶನಿವಾರ ಸಂಜೆ ಬಿರುಸಿನ ಮಳೆ ಸುರಿಯಿತು
ಚಿಕ್ಕಜಾಜೂರಿನಲ್ಲಿ ಶನಿವಾರ ಸಂಜೆ ಬಿರುಸಿನ ಮಳೆ ಸುರಿಯಿತು   

ಚಿಕ್ಕಜಾಜೂರು: ಚಿಕ್ಕಜಾಜೂರು ಸೇರಿದಂತೆ ಹಲವೆಡೆ ಶನಿವಾರ ಸಂಜೆ ಉತ್ತಮ ಮಳೆಯಾಗಿದೆ. ಸಂಜೆ ಆರಂಭವಾದ ಮಳೆ ಸ್ವಲ್ಪ ಸಮಯದ ನಂತರ ಬಿರುಸು ಪಡೆಯಿತು. ಚಿಕ್ಕಜಾಜೂರು, ಚನ್ನಪಟ್ಟಣ, ಕೋಟೆಹಾಳ್‌, ಕೊಡಗವಳ್ಳಿ, ಹೊಸಹಳ್ಳಿ, ಪಾಡಗಟ್ಟೆ, ಆಡನೂರು, ಹರೇನಳ್ಳಿ, ಅಪ್ಪರಸನಹಳ್ಳಿ ಮೊದಲಾದ ಕಡೆಗಳಲ್ಲಿ ಬಿರುಸಿನ ಮಳೆ ಸುರಿದಿದೆ.

ಸಮೀಪದ ಬಿಜ್ಜೆನಾಳ್‌, ಚಿಕ್ಕಎಮ್ಮಿಗನೂರು, ಹಿರೇಎಮ್ಮಿಗನೂರು, ಅಂತಾಪುರ ಮೊದಲಾದ ಕಡೆಗಳಲ್ಲಿ ಗುರುವಾರ ಹಾಗೂ ಶುಕ್ರವಾರ ಉತ್ತಮ ಮಳೆಯಾಗಿದ್ದು, ಜಮೀನು ಹಾಗೂ ತೋಟಗಳ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT