ಹೊಳಲ್ಕೆರೆ: ತಾಲ್ಲೂಕಿನ ತಾಳ್ಯ ಭಾಗದಲ್ಲಿ ಶನಿವಾರ ಸಂಜೆ 2 ಗಂಟೆಗೂ ಹೆಚ್ಚು ಹೊತ್ತು ಬಿರುಸಿನ ಮಳೆ ಸುರಿಯಿತು. ಹಳ್ಳ, ಕೊಳ್ಳಗಳು ತುಂಬಿ ಹರಿದಿವೆ.
ಕರಿಯಮ್ಮನ ಹಳ್ಳ ತುಂಬಿ ಹರಿದ ಪರಿಣಾಮ ತಾಳ್ಯ-ಹೊಸದುರ್ಗ ಮಾರ್ಗದ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಹಳ್ಳದಲ್ಲಿ ಭಾರಿ ನೀರು ಹರಿದ ಕಾರಣ ಬೈಕ್, ಕಾರು ಸೇರಿದಂತೆ ವಾಹನ ಸವಾರರು ಹಳ್ಳ ದಾಟಲು ಹರಸಾಹಸಪಟ್ಟರು.
‘ರಾಜ್ಯ ಹೆದ್ದಾರಿ ಮೇಲೆಯೇ ಕರಿಯಮ್ಮನ ಹಳ್ಳ ಹರಿಯುತ್ತಿದ್ದು, ಮಳೆಗಾಲದಲ್ಲಿ ಸಮಸ್ಯೆ ಉಂಟಾಗುತ್ತದೆ. ಇಲ್ಲಿಗೆ ಒಂದು ಸೇತುವೆ ನಿರ್ಮಿಸಬೇಕು’ ಎಂದು ವಾಹನ ಸವಾರರು ಆಗ್ರಹಿಸಿದರು.
ಪಟ್ಟಣ ಸೇರಿದಂತೆ ಬೊಮ್ಮನ ಕಟ್ಟೆ, ಲೋಕದೊಳಲು, ಎಮ್ಮೆಹಟ್ಟಿ, ಗುಡ್ಡದ ಸಾಂತೇನಹಳ್ಳಿ ಭಾಗದಲ್ಲಿ ಬಿರುಸಿನ ಮಳೆ ಸುರಿದಿದ್ದು, ತೋಟಗಳಲ್ಲಿ ನೀರು ನಿಂತಿದೆ. ಹದ ಮಳೆಯಿಂದ ಅಡಿಕೆ ತೋಟಗಳಿಗೆ ಅನುಕೂಲ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.