ADVERTISEMENT

ಮೊಳಕಾಲ್ಮುರು | ‘ಮಾರಮ್ಮ ಜಾತ್ರೆ: ರಸ್ತೆಗೆ ಕಾಮಗಾರಿ ಪೂರ್ಣಕ್ಕೆ ಕ್ರಮ’

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 16:18 IST
Last Updated 23 ಜುಲೈ 2024, 16:18 IST
ಮೊಳಕಾಲ್ಮುರು ಸಮೀಪದ ಗೌರಸಮುದ್ರ– ಕೋನಸಾಗರ ಸಂಪರ್ಕ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಸೋಮವಾರ ಶಂಕುಸ್ಥಾಪನೆ ಮಾಡಿ ಮಾತನಾಡಿದರು
ಮೊಳಕಾಲ್ಮುರು ಸಮೀಪದ ಗೌರಸಮುದ್ರ– ಕೋನಸಾಗರ ಸಂಪರ್ಕ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಸೋಮವಾರ ಶಂಕುಸ್ಥಾಪನೆ ಮಾಡಿ ಮಾತನಾಡಿದರು    

ಮೊಳಕಾಲ್ಮುರು: ₹ 1 ಕೋಟಿ ವೆಚ್ಚದಲ್ಲಿ ವಿಧಾನಸಭಾ ಕ್ಷೇತ್ರದ ಗೌರಸಮುದ್ರ– ಕೋನಸಾಗರ ಸಂಕರ್ಪ ರಸ್ತೆ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಹೇಳಿದರು.

ಸೋಮವಾರ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿ ಅವರು ಮಾತನಾಡಿದರು.

ಗೌರಸಮುದ್ರವು ಐತಿಹಾಸಿಕ ಮಾರಮ್ಮದೇವಿ ಮೂಲ ಸ್ಥಳವಾಗಿದ್ದು, ನಿತ್ಯ ಸಾವಿರಾರು ಭಕ್ತರು ಬಂದು ಹೋಗುತ್ತಾರೆ. ಬಳ್ಳಾರಿ, ಆಂಧ್ರಪ್ರದೇಶ, ಮೊಳಕಾಲ್ಮುರು ಭಾಗದಿಂದ ಗೌರಸಮುದ್ರವನ್ನು ಸಂಪರ್ಕಿಸಲು ಈ ರಸ್ತೆ ಮುಖ್ಯ ಸಂಪರ್ಕವಾಗಿದೆ. ಸೆಪ್ಟಂಬರ್‌ನಲ್ಲಿ ಮಾರಮ್ಮದೇವಿ ಜಾತ್ರೆ ಇರುವ ಕಾರಣ ಅದರ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಇದರಿಂದ ಗೌರಸಮುದ್ರವನ್ನು ಸಂಪರ್ಕಿಸುವ ಬಹುತೇಕ ಎಲ್ಲ ರಸ್ತೆಗಳು ನವೀಕರಣ ಆದಂತಾಗುತ್ತದೆ ಎಂದರು.

ADVERTISEMENT

ತಹಶೀಲ್ದಾರ್‌ ಟಿ.ಜಗದೀಶ್‌, ಲೋಕೋಪಯೋಗಿ ಇಲಾಖೆ ಎಇಇ ಲಕ್ಷ್ಮೀನಾರಾಯಣ, ಗ್ರಾಮ ಪಂಚಾಯಿತಿ ಅಧ್ಕ್ಷಕ್ಷ ರಾಮಮೂರ್ತಿ, ಗೌರಸಮುದ್ರದ ಓಬಣ್ಣ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಎಸ್.‌ಖಾದರ್‌, ಜಿಲ್ಲಾ ಘಟಕದ ಉಪಾಧ್ಯಕ್ಷ ನಾಗಸಮುದ್ರ ಗೋವಿಂದಪ್ಪ, ಕುರುಬ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಎನ್.‌ಜಗದೀಶ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.