ADVERTISEMENT

ಚಿತ್ರದುರ್ಗ: ಪ್ರವಾಸಿ ಮಾರ್ಗದರ್ಶಿಗಳ ಸಂಘಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 15:57 IST
Last Updated 2 ಜುಲೈ 2025, 15:57 IST
ಚಿತ್ರದುರ್ಗದ ಮಯೂರ ದುರ್ಗದ ಸಭಾಂಗಣದಲ್ಲಿ ಬುಧವಾರ ನಡೆದ ಕರ್ನಾಟಕ ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘದ ರಾಜ್ಯ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದ ಪ್ರವಾಸಿ ಮಾರ್ಗದರ್ಶಿಗಳು
ಚಿತ್ರದುರ್ಗದ ಮಯೂರ ದುರ್ಗದ ಸಭಾಂಗಣದಲ್ಲಿ ಬುಧವಾರ ನಡೆದ ಕರ್ನಾಟಕ ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘದ ರಾಜ್ಯ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದ ಪ್ರವಾಸಿ ಮಾರ್ಗದರ್ಶಿಗಳು   

ಚಿತ್ರದುರ್ಗ: ಕರ್ನಾಟಕ ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘದ ರಾಜ್ಯ ಘಟಕದ ಗೌರವಾಧ್ಯಕ್ಷರಾಗಿ ಬಿ.ಮೊಹಿದ್ದೀನ್‌ ಖಾನ್‌ ಅವರನ್ನು ಆಯ್ಕೆ ಮಾಡಲಾಗಿದೆ.

ನಗರದ ಮಯೂರ ದುರ್ಗದ ಸಭಾಂಗಣದಲ್ಲಿ ಬುಧವಾರ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷರಾಗಿ ಮೈಸೂರಿನ ಅಶೋಕ್‌, ಕಾರ್ಯಾಧ್ಯಕ್ಷರಾಗಿ ಹಂಪಿಯ ಎಂ.ನಾಗರಾಜ್‌ ಅವರನ್ನು ಆಯ್ಕೆ ಮಾಡಲಾಯಿತು.

ಉಳಿದಂತೆ ಹಂಪಿಯ ದೇವರಾಜ್‌ (ಉಪಾಧ್ಯಕ್ಷ), ವಿರೂಪಾಕ್ಷಿ (ಪ್ರಧಾನ ಕಾರ್ಯದರ್ಶಿ), ಕೋಲಾರದ ಚಂದ್ರಶೇಖರ್‌ (ಖಜಾಂಚಿ), ಚನ್ನಬಸಪ್ಪ (ಸಂಘಟನಾ ಕಾರ್ಯದರ್ಶಿ), ಹಾಸನದ ಅಂಬರೀಷ್‌ (ಸಂಚಾಲಕ), ದಾವಣಗೆರೆಯ ಹಾಲೇಶ್‌ (ಕಾನೂನು ಸಲಹೆಗಾರ), ಹೈದರಾಬಾದ್ ಕರ್ನಾಟಕ ವಿಭಾಗದ ಅಧ್ಯಕ್ಷರಾಗಿ ಹಂಪಿಯ ಲೋಕಭಿರಾಮ್‌, ವಿಭೂತಿ ಪಂಪಾಪತಿ (ಕಾರ್ಯದರ್ಶಿ), ಕೊಪ್ಪಳದ ಕುಮಾರ ಸ್ವಾಮಿ (ಉಪಾಧ್ಯಕ್ಷ).

ADVERTISEMENT

ಬೆಂಗಳೂರು, ಮೈಸೂರು, ಕೋಲಾರ, ಮಂಡ್ಯ, ಹಾಸನ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಉಡುಪಿ, ಕೊಲ್ಲೂರು ಮಂಗಳೂರು, ಕಾರವಾರ, ಬಾಗಲಕೋಟೆ, ವಿಜಯನಗರ, ವಿಜಯಪುರ, ಕಲಬುರಗಿ, ಕೊಪ್ಪಳ, ಬಿಜಾಪುರ, ಚಾಮರಾಜನಗರ, ಸೋಮನಾಥಪುರ ಪ್ರವಾಸಿ ತಾಣಗಳ ಪ್ರವಾಸಿ ಮಾರ್ಗದರ್ಶಿಗಳನ್ನು ರಾಜ್ಯ ಸಮಿತಿಗೆ ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು.

ಉದ್ಯಮಿಗಳಾದ ಬಾಬು, ರೀಜವಾನ್‌ ಸಾಬ್‌, ಸಾಹಸಿ ಕೋತಿರಾಜ್‌ ಅವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.