ಹಿರಿಯೂರು(ಚಿತ್ರದುರ್ಗ):ನಗರದ ಕಾದಂಬರಿಕಾರ ಡಿ.ಸಿ. ಪಾಣಿ ಅವರಿಗೆ ಭಾನುವಾರ ಬೆಳಗಾವಿಯ ‘ಜೀವನ್ ರೇಖಾ’ ಆಸ್ಪತ್ರೆಯಲ್ಲಿ ಕೋವಿಡ್–19 ಪ್ರಾಯೋಗಿಕ ಲಸಿಕೆಯನ್ನು ನೀಡಲಾಯಿತು.
ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಪಾಣಿ, ‘ಡಾ.ಪರಿತೋಷ್ ವಿ. ದೇಸಾಯಿ ಅವರು ವಿಶೇಷ ಫಾರ್ಮಾಜೆಟ್ ಮಷಿನ್ ಮೂಲಕ ಪ್ರಾಯೋಗಿಕ ಲಸಿಕೆಯನ್ನು ನನಗೆ ನೀಡಿದರು. ಇದೊಂದು ಅವಿಸ್ಮರಣೀಯ ಘಟನೆ. ಅತ್ಯಂತ ಪರಿಣಾಮಕಾರಿ ಲಸಿಕೆ ನಮ್ಮ ದೇಶದಲ್ಲೇ ಉತ್ಪಾದನೆ ಆಗಲಿದೆ. ಜನರನ್ನು ಭಯಗೊಳಿಸಿರುವ ಕೊರೊನಾ ಸೋಂಕು ಶೀಘ್ರದಲ್ಲೇ ಅಂತ್ಯ ಕಾಣಲಿದೆ’ ಎಂದರು.
ಪ್ರಯೋಗಕ್ಕೆ ಒಳಗಾಗಲು ಸ್ವ-ಇಚ್ಛೆಯಿಂದ ಸಿದ್ಧವಿರುವುದಾಗಿ ಪಾಣಿ ಹೇಳಿಕೆ ನೀಡಿದ ನಂತರ ಆಗಸ್ಟ್ 3ರಂದು ಬೆಳಗಾವಿಯಲ್ಲಿ ಅವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.