ADVERTISEMENT

ಚಿತ್ರದುರ್ಗ|ಬಾಲ ಬಿಚ್ಚದರೆ ಗಡಿಪಾರು: ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 10 ಮೇ 2025, 15:32 IST
Last Updated 10 ಮೇ 2025, 15:32 IST
ಚಿತ್ರದುರ್ಗದ ಪೊಲೀಸ್‌ ಮೈದಾನದಲ್ಲಿ ನಡೆದ ರೌಡಿಶೀಟರ್‌ ಪೆರೇಡ್‌ನಲ್ಲಿ ಡಿವೈಎಸ್‌ಪಿ ಪಿ.ಕೆ. ದಿನಕರ್‌ ಅವರು ರೌಡಿಶೀಟರ್‌ಗಳಿಗೆ ಎಚ್ಚರಿಕೆ ನೀಡಿದರು
ಚಿತ್ರದುರ್ಗದ ಪೊಲೀಸ್‌ ಮೈದಾನದಲ್ಲಿ ನಡೆದ ರೌಡಿಶೀಟರ್‌ ಪೆರೇಡ್‌ನಲ್ಲಿ ಡಿವೈಎಸ್‌ಪಿ ಪಿ.ಕೆ. ದಿನಕರ್‌ ಅವರು ರೌಡಿಶೀಟರ್‌ಗಳಿಗೆ ಎಚ್ಚರಿಕೆ ನೀಡಿದರು   

ಚಿತ್ರದುರ್ಗ: ‘ರೌಡಿಶೀಟ್‌ ಹೊಂದಿರುವವರು ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗದೇ ತಮ್ಮ ಪಾಡಿಗೆ ತಾವಿರಬೇಕು. ಬಾಲ ಬಿಚ್ಚುವುದು ಕಂಡುಬಂದರೆ ಗಡಿಪಾರಿಗೆ ಶಿಫಾರಸು ಮಾಡಲಾಗುವುದು’ ಎಂದು ಡಿವೈಎಸ್‌ಪಿ ಪಿ.ಕೆ.ದಿನಕರ್‌ ಎಚ್ಚರಿಕೆ ನೀಡಿದರು.

ನಗರದ ಪೊಲೀಸ್‌ ಮೈದಾನದಲ್ಲಿ ನಡೆದ ರೌಡಿಶೀಟರ್‌ಗಳ ಪೆರೇಡ್‌ನಲ್ಲಿ ಅವರು ಮಾತನಾಡಿದರು.

‘ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕು. ರೌಡಿಶೀಟರ್‌ಗಳು ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು. ಅವರ ಮೇಲೆ ಸದಾ ಕಾಲ ಪೊಲೀಸ್‌ ನಿಗಾ ಇರುತ್ತದೆ. ನ್ಯಾಯದ ಹಾದಿಯಲ್ಲಿ ಬದುಕಬೇಕು’ ಎಂದು ಸೂಚಿಸಿದರು.

ADVERTISEMENT

‘ರೌಡಿಪಟ್ಟಿ ತೆರೆದ ನಂತರ ಅವರ ಬದುಕು ದುಸ್ತರವಾಗುತ್ತದೆ. ಮುಂದೆ ರೌಡಿಪಟ್ಟಿಯಿಂದ ಹೊರಬರುವ ರೀತಿಯಲ್ಲಿ ನಡೆದುಕೊಳ್ಳಬೇಕು. ಆ ಮೂಲಕ ರೌಡಿಶೀಟ್‌ನಿಂದ ಮುಕ್ತರಾಗಿ ನೆಮ್ಮದಿ ಬದುಕು ಕಂಡುಕೊಳ್ಳಬೇಕು. ಇಲ್ಲದಿದ್ದರೆ ಬುದ್ಧಿ ಕಲಿಸಲಾಗುವುದು’ ಎಂದರು.

ಇನ್‌ಸ್ಪೆಕ್ಟರ್‌ಗಳಾದ ದೊಡ್ಡಯ್ಯ, ಉಮೇಶ್‌ಬಾಬು, ಚಿಕ್ಕಣ್ಣನವರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.