
ಚಿತ್ರದುರ್ಗ: ನಗರದ ದೇವರಾಜ ಅರಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷ 2026, ಜ.10ರಿಂದ ಜ.13ರವರೆಗೆ ಡೆಸ್ಟಿನಿ ಸಾಂಸ್ಕೃತಿಕ ಹಬ್ಬ ಮತ್ತು ಪಾರಂಪರಿಕ ದಿನಾಚರಣೆ ನಡೆಯಲಿದ್ದು ಅದಕ್ಕೆ ಪೂರ್ವಭಾವಿಯಾಗಿ ಶನಿವಾರ ಲೋಗೊ ಅನಾವಣಗೊಳಿಸಲಾಯಿತು.
ಎಲ್‌ಕೆಜಿ, ಯುಕೆಜಿ, 1ನೇ ತರಗತಿಯಿಂದ 10ನೇ ತರಗತಿ, ಪದವಿ ಪೂರ್ವ, ಪದವಿ, ನರ್ಸಿಂಗ್, ಫಾರ್ಮಸಿ, ಪ್ರಕೃತಿ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳು, ಸಿಬ್ಬಂದಿ ಈ ವೇಳೆ ಪಾಲ್ಗೊಂಡಿದ್ದರು. ಅದ್ದೂರಿ ಸಮಾರಂಭದಲ್ಲಿ, ಜಯಘೋಷಗಳ ನಡುವೆ ಲೋಗೊ ಅನಾವರಣಗೊಳಿಸಲಾಯಿತು.
ದೇವರಾಜ ಅರಸ್ ಶಿಕ್ಷಣ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಚಂದ್ರಕಲಾ, ಸಿಇಒ ಎಂ.ಸಿ ರಘು ಚಂದನ್ ಲೋಗೊ ಅನಾವರಣಗೊಳಿಸಿದರು. ಈ ವೇಳೆ ಸಾವಿರಾರು ವಿದ್ಯಾರ್ಥಿಗಳು ಡಿ.ಜೆ ಸದ್ದಿಗೆ ಕುಣಿದು ಕುಪ್ಪಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.