ADVERTISEMENT

ಜ.2ಕ್ಕೆ ಗ್ರಾಮ ಪಂಚಾಯಿತಿ ಚುನಾವಣೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 17:08 IST
Last Updated 14 ಡಿಸೆಂಬರ್ 2018, 17:08 IST
ಮೊಳಕಾಲ್ಮುರಿನ ಶಾಸಕ ಭವನ ಎದುರು ಆರೋಗ್ಯ ಇಲಾಖೆ ಗುತ್ತಿಗೆ ನೌಕರರು ಶುಕ್ರವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಮೊಳಕಾಲ್ಮುರಿನ ಶಾಸಕ ಭವನ ಎದುರು ಆರೋಗ್ಯ ಇಲಾಖೆ ಗುತ್ತಿಗೆ ನೌಕರರು ಶುಕ್ರವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.   

ಹೊಳಲ್ಕೆರೆ: ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಜ.2ರಂದು ಚುನಾವಣೆ ನಡೆಸಲು ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ.

ಅಂದನೂರು ಗ್ರಾಮ ಪಂಚಾಯಿತಿಯ ಬಿ.ಮಲ್ಲೇನಹಳ್ಳಿ (ಬಿಸಿಎಂ ‘ಬಿ’), ಆಡನೂರು ಗ್ರಾಮ ಪಂಚಾಯಿತಿಯ ಪಾಡಿಗಟ್ಟೆ (ಎಸ್.ಸಿ), ಮಲ್ಲಾಡಿ ಹಳ್ಳಿ ಪಂಚಾಯಿತಿಯ ಮಲ್ಲಾಡಿಹಳ್ಳಿ-2 (ಬಿಸಿಎಂ ‘ಎ’), ಎನ್.ಜಿ. ಹಳ್ಳಿ ಗ್ರಾಮ ಪಂಚಾಯಿತಿಯ ಗೌಡಿಹಳ್ಳಿ (ಬಿಸಿಎಂ ‘ಎ’ಮಹಿಳೆ), ತುಪ್ಪದಹಳ್ಳಿ ಗ್ರಾಮ ಪಂಚಾಯಿತಿಯ ತುಪ್ಪದಹಳ್ಳಿ-1 (ಎಸ್.ಸಿ) ಸ್ಥಾನಗಳು ತೆರವಾಗಿದ್ದು, ಚುನಾವಣೆ ನಡೆಯಲಿದೆ.

ಡಿ.17ರಂದು ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಸಲು ಡಿ.20, ನಾಮಪತ್ರ ಪರಿಶೀಲನೆ ಡಿ.21, ನಾಮಪತ್ರ ಹಿಂಪಡೆಯಲು ಡಿ.24, ಮರು ಮತದಾನದ ಅಗತ್ಯವಿದ್ದಲ್ಲಿ ಡಿ.3 ನಿಗದಿಪಡಿಸಲಾಗಿದೆ ಎಂದು ತಹಶೀಲ್ದಾರ್ ವೈ. ತಿಪ್ಪೇಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.