ADVERTISEMENT

ಹೊಸದುರ್ಗ: ಪಕ್ಷಿಗಳಿಗೆ ಧಾನ್ಯ, ನೀರು ಒದಗಿಸುವ ಟ್ರಸ್ಟ್

ಉಚಿತವಾಗಿ ಮಣ್ಣಿನ ತಟ್ಟೆ, ಬಾಟಲ್ ವಿತರಣೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 23:42 IST
Last Updated 4 ಜೂನ್ 2023, 23:42 IST
ಹೊಸದುರ್ಗದ ಸೈಕ್ಲಿಕ್ ಗ್ರೂಪ್ ಅಂಡ್ ಇಕೋ ಟ್ರಸ್ಟ್ ವತಿಯಿಂದ ಉಚಿತವಾಗಿ ನೀಡಲಾಗುವ ಮಣ್ಣಿನ ತಟ್ಟೆ, ನೀರಿನ ಬಾಟಲ್
ಹೊಸದುರ್ಗದ ಸೈಕ್ಲಿಕ್ ಗ್ರೂಪ್ ಅಂಡ್ ಇಕೋ ಟ್ರಸ್ಟ್ ವತಿಯಿಂದ ಉಚಿತವಾಗಿ ನೀಡಲಾಗುವ ಮಣ್ಣಿನ ತಟ್ಟೆ, ನೀರಿನ ಬಾಟಲ್   

ಶ್ವೇತಾ ಜಿ.

ಹೊಸದುರ್ಗ: ಬೇಸಿಗೆಯ ಬಿಸಿಲು ಜನರ ಹಾಗೆ ಪ್ರಾಣಿ ಪಕ್ಷಿಗಳನ್ನೂ ಬಳಲಿಸುತ್ತದೆ. ಆಹಾರ, ನೀರಿಗಾಗಿ ಅವು ಪರದಾಡುತ್ತವೆ. ಹೊಸದುರ್ಗದ ಸೈಕ್ಲಿಕ್ ಗ್ರೂಪ್ ಅಂಡ್ ಇಕೋ ಟ್ರಸ್ಟ್, ಪಕ್ಷಿಗಳಿಗೆ ನೀರಿನ ಆಸರೆ ಒದಗಿಸಲು ಮುಂದಾಗಿದೆ. 

ಮನೆ ಅಥವಾ ಮರದ ಮೇಲೆ ನೀರು, ಧಾನ್ಯಗಳನ್ನು ಇರಿಸಲು ಬೇಕಾಗುವ ಪರಿಕರಗಳನ್ನು ಒದಗಿಸಲು ಟ್ರಸ್ಟ್ ಮುಂದೆ ಬಂದಿದೆ. ಆಸಕ್ತರಿಗೆ ಮಣ್ಣಿನ ತಟ್ಟೆ ಹಾಗೂ ಪ್ಲಾಸ್ಟಿಕ್ ಬಾಟಲ್‌ಗಳನ್ನು ಉಚಿತವಾಗಿ ನೀಡುತ್ತಿದೆ. 

ADVERTISEMENT

ಭಾರ್ಗವ್ ಆರ್., ಅಭಿನಂದನ್ ಜೈನ್, ಅರ್ಜುನ್ ಸಿ.ಆರ್ ಹಾಗೂ ಪ್ರವೀಣ್ ವಿ. ಎಂಬ ಸಮಾನ ಮನಸ್ಕರು 2001ರಲ್ಲಿ ಪರಿಸರ ಸಂರಕ್ಷಣೆ ಉದ್ದೇಶದಿಂದ ಟ್ರಸ್ಟ್ ಹುಟ್ಟು ಹಾಕಿದ್ದರು. ಅಂದಿನಿಂದ ಪರಿಸರ ಸಂರಕ್ಷಣೆಗಾಗಿ ಈ ಟ್ರಸ್ಟ್ ನಿರಂತರ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ. 

‘ಗುಬ್ಬಚ್ಚಿಗಳು ದೂರವಾದರೆ ಜನರ ಜೀವನ ಕಷ್ಟದಲ್ಲಿದೆ ಎಂದರ್ಥ. ಗುಬ್ಬಚ್ಚಿ ಮಾತ್ರವಲ್ಲ ಎಲ್ಲ ಪ್ರಾಣಿ, ಪಕ್ಷಿ ಸಂಕುಲದ ರಕ್ಷಣೆಗಾಗಿ ಸಾಧ್ಯವಾದಷ್ಟು ಕೆಲಸ ಮಾಡಿದ್ದೇವೆ. ಪ್ರತಿ ವರ್ಷ ಬೇಸಿಗೆ ಆರಂಭದಲ್ಲಿ ವಿಶ್ವ ಗುಬ್ಬಚ್ಚಿ ದಿನದಂದು ಮಣ್ಣಿನ ತಟ್ಟೆ ಹಾಗೂ ನೀರು ಇರಿಸುವ ಬಾಟಲ್‌ಗಳನ್ನು ಉಚಿತವಾಗಿ ನೀಡುತ್ತೇವೆ. ಕಳೆದ ಎರಡು ವರ್ಷಗಳಿಂದ 150 ಜನರಿಗೆ ಈ ಪರಿಕರಗಳನ್ನು ನೀಡಲಾಗಿದೆ. ಪಕ್ಷಿಗಳಿಗೆ ಆಹಾರ ಧಾನ್ಯ ನೀಡುವ ವಿಧಾನದ ಬಗ್ಗೆಯೂ ಮಾಹಿತಿ ನೀಡಿದ್ದೇವೆ’ ಎನ್ನುತ್ತಾರೆ ಟ್ರಸ್ಟ್ ಸದಸ್ಯ ಭಾರ್ಗವ್ ಆರ್.

‘ತಾಲ್ಲೂಕಿನಾದ್ಯಂತ ಸೈಕಲ್ ಜಾಥಾ ಮೂಲಕ ಮಾಲಿನ್ಯಮುಕ್ತ ವಾತಾವರಣ ಹಾಗೂ ಸೈಕ್ಲಿಂಗ್‌ನ ಮಹತ್ವದ ಬಗ್ಗೆಯೂ ತಿಳಿಸಲಾಗಿದೆ. ಅರಣ್ಯ ಇಲಾಖೆಯವರ ಸಹಕಾರದಲ್ಲಿ ತಾಲ್ಲೂಕಿನಾದ್ಯಂತ ಜನರಿಗೆ ಸಸಿಗಳನ್ನು ವಿತರಿಸಿದ್ದೇವೆ. ಇಲಾಖೆಯ ಹಲವು ಕಾರ್ಯಕ್ರಮಗಳಿಗೆ ಬೆಂಬಲ ನೀಡಿದ್ದೇವೆ’ ಎನ್ನುತ್ತಾರೆ ಅವರು.

ಪರಿಸರ ಸಂರಕ್ಷಣೆ ಒಬ್ಬರಿಂದ ಸಾಧ್ಯವಿಲ್ಲ. ಎಲ್ಲರೂ ಕೈಜೋಡಿಸಿ ಬೆಂಬಲ ನೀಡಬೇಕು. ಮಣ್ಣಿನ ತಟ್ಟೆಗಳನ್ನು ಉಚಿತವಾಗಿ ನೀಡಿದರೂ ತೆಗೆದುಕೊಳ್ಳುವವರು.

ವಿರಳ ಅರ್ಜುನ್ ಟ್ರಸ್ಟ್ ಕಾರ್ಯದರ್ಶಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.