ADVERTISEMENT

ಬಂಗಾರ ಹರಾಜಿಗೆ ರೈತರ ವಿರೋಧ

ಕಾಲವಕಾಶ ನೀಡಲು ರಾಜ್ಯ ರೈತ ಸಂಘ ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 3:51 IST
Last Updated 8 ನವೆಂಬರ್ 2020, 3:51 IST
ಬಂಗಾರ ಹರಾಜು ವಿರೋಧಿಸಿ ನಾಯಕನಹಟ್ಟಿ ಪಟ್ಟಣದ ಕೆನರಾ ಬ್ಯಾಂಕ್ ಎದುರು ಶನಿವಾರ ರೈತ ಸಂಘದ ಮುಖಂಡರು ಪ್ರತಿಭಟನೆ ನಡೆಸಿದರು.
ಬಂಗಾರ ಹರಾಜು ವಿರೋಧಿಸಿ ನಾಯಕನಹಟ್ಟಿ ಪಟ್ಟಣದ ಕೆನರಾ ಬ್ಯಾಂಕ್ ಎದುರು ಶನಿವಾರ ರೈತ ಸಂಘದ ಮುಖಂಡರು ಪ್ರತಿಭಟನೆ ನಡೆಸಿದರು.   

ನಾಯಕನಹಟ್ಟಿ: ರೈತರು ಅಡವಿಟ್ಟಿರುವ ಬಂಗಾರವನ್ನು ಹರಾಜು ಹಾಕದೇ ಬಂಗಾರ ಬಿಡಿಸಿಕೊಳ್ಳಲು ಕಾಲವಕಾಶ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಒತ್ತಾಯಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ರಾಷ್ಟ್ರೀಯ ಕಿಸಾನ್ ಸಂಘ ಪಟ್ಟಣದ ಕೆನರಾ ಬ್ಯಾಂಕ್ ಎದುರು ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಬೆಳೆದ ಬೆಳೆ ರೈತನ ಕೈಸೇರದೆ ಕಂಗಾಲಾಗಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ರೈತರು ಅಡವಿಟ್ಟ ಬಂಗಾರವನ್ನು ಹರಾಜು ಹಾಕುವುದು ಸರಿಯಲ್ಲ ಎಂದು ಹೇಳಿದರು.

ADVERTISEMENT

ಜಿಲ್ಲಾ ಲೀಡ್‌ ಬ್ಯಾಂಕ್ ವ್ಯವಸ್ಥಾಪಕ ಚಂದ್ರಯ್ಯ ಹಿರೇಮಠ್, ‘ಆರ್‌ಬಿಐ ನಿಯಮಾವಳಿಯಂತೆ ಹರಾಜು ಪ್ರಕ್ರಿಯೆಗೆ ಮುಂದಾಗಿದ್ದೇವೆ’ ಎಂದು ಹರಾಜು ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದರು.

ಕೆ.ಸಿ. ಶ್ರೀಕಂಠಮೂರ್ತಿ, ಯರ‍್ರಿಸ್ವಾಮಿ, ತಿಪ್ಪೇಸ್ವಾಮಿ, ರಾಜಣ್ಣ, ಮಲ್ಲಿಕಾರ್ಜುನ, ಬಿ.ಟಿ.ಪ್ರಕಾಶ್, ಓಬಣ್ಣ, ಬೋರಣ್ಣ, ಬೋರಯ್ಯ, ಬ್ಯಾಂಕ್ ಕೃಷಿ ವಿಸ್ತರಣಾಧಿಕಾರಿ ಕೆ.ಎಸ್. ಸಂತೋಷ್, ಮಹಾಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.