ADVERTISEMENT

ಜಗಳೂರು ತಾಲ್ಲೂಕಿನ ಗಡಿಮಾಕುಂಟೆ ಗ್ರಾಮದಲ್ಲಿ ಅಗ್ನಿ ಅವಘಡ

ಇಡೀ ರಾತ್ರಿ ಹೊತ್ತು ಉರಿದ ಕಣಗಳು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2018, 2:52 IST
Last Updated 11 ಡಿಸೆಂಬರ್ 2018, 2:52 IST
   

ಜಗಳೂರು: ತಾಲ್ಲೂಕಿನ ಗಡಿಮಾಕುಂಟೆ ಗ್ರಾಮದಲ್ಲಿ ಸೋಮವಾರ ಮಧ್ಯರಾತ್ರಿಅಗ್ನಿ ಅವಘಡ ಸಂಭವಿಸಿದ್ದು 10ಕ್ಕೂ ಹೆಚ್ಚು ರೈತರ ಕಣಗಳಲ್ಲಿದ್ದ ಮೆದೆ ಬೆಂಕಿಗೆ ಆಹುತಿಯಾಗಿದೆ.

ರೈತರುವರ್ಷವಿಡೀ ಕಷ್ಟಪಟ್ಟು ಬೆಳೆದಿದ್ದಮೆಕ್ಕೆಜೋಳ, ಶೇಂಗಾ ಬೆಳೆಯ ಮೆದೆಗಳುಭಸ್ಮವಾಗಿವೆ.ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಜಗಳೂರು, ಕೊಟ್ಟೂರು, ಕೂಡ್ಲಿಗಿಯಿಂದ ಅಗ್ನಿಶಾಮಕ ವಾಹನಗಳು ಆಗಮಿಸಿ ನಸುಕಿನವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿಯ ಜ್ವಾಲೆ ಗ್ರಾಮಕ್ಕೆ ಹರಡುವುದನ್ನು ತಡೆಗಟ್ಟುವಲ್ಲಿ ಯಶಸ್ವಿಯಾದವು. ಇದರಿಂದ ಭಾರಿ ಅನಾಹುತ ತಪ್ಪಿತು.

ADVERTISEMENT

ಗಡಿಮಾಕುಂಟೆ ಗ್ರಾಮವುಜಗಳೂರಿನಿಂದ 20 ಕಿ.ಮೀ ದೂರದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.