ADVERTISEMENT

ಮೊಳಕಾಲ್ಮುರು: ವೈಭವದ ಶ್ರೀನಿವಾಸ ಕಲ್ಯಾಣೋತ್ಸವ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 6:05 IST
Last Updated 29 ನವೆಂಬರ್ 2021, 6:05 IST
ಮೊಳಕಾಲ್ಮುರಿನ ರಾಘವೇಂದ್ರ ಸ್ವಾಮಿ ಮಠದಲ್ಲಿ ಭಾನುವಾರ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಿತು.
ಮೊಳಕಾಲ್ಮುರಿನ ರಾಘವೇಂದ್ರ ಸ್ವಾಮಿ ಮಠದಲ್ಲಿ ಭಾನುವಾರ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಿತು.   

ಮೊಳಕಾಲ್ಮುರು:ಇಲ್ಲಿನ ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ಭಾನುವಾರ ನೂತನವಾಗಿ ನಿರ್ಮಿಸಿರುವ ಪದ್ಮಾವತಿ ಕಲ್ಯಾಣ ಮಂಟಪ ಲೋಕಾರ್ಪಣೆಮಾಡಲಾಯಿತು.

ರಾಘವೇಂದ್ರ ಸ್ವಾಮಿ ಮಠದಿಂದ ₹50 ಲಕ್ಷ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. ಲೋಕಾರ್ಪಣೆ ಅಂಗವಾಗಿ ಶನಿವಾರಪುಣ್ಯಾಹ, ಮಹಾ ಗಣಪತಿ ಪೂಜೆ, ಸ್ವಸ್ತಿವಾಚನ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ಕಾರ್ಯಗಳು ಜರುಗಿದವು.

ಭಾನುವಾರ ಬೆಳಿಗ್ಗೆ ಗೋಪೂಜೆ, ಶ್ರೀನಿವಾಸ ಸ್ವಾಮಿಯ ಪ್ರವೇಶ, ಸ್ವಾಮಿಗೆ ಆರತಿ, ಶ್ರೀನಿವಾಸ ಸ್ವಾಮಿಗೆ ವರಪೂಜೆ, ದೇವರಿಗೆ ಮಂಗಳ ಸ್ನಾನ,ಪುಣ್ಯಾಹ, ನಾಂದಿ, ಲಕ್ಷ್ಮೀ ಪೂಜೆ, ಮಧುಪರ್ಕ ಪೂಜೆ, ಕಾಶಿಯಾತ್ರೆ ನಡೆಸಲಾಯಿತು.

ADVERTISEMENT

ಮಧ್ಯಾಹ್ನ ನಿರೀಕ್ಷಣೆ, ಕನ್ಯಾದಾನ, ಕಂಕಣ ಬಂಧನ, ಮಾಂಗಲ್ಯಧಾರಣೆ, ಮಹಾಮಂಗಳಾರತಿ, ಹಸ್ತೋದಕ, ತೀರ್ಥಪ್ರಸಾದ, ನೈವೇದ್ಯ, ಮಂತ್ರಾಕ್ಷತೆನೀಡಲಾಯಿತು. ಬೆಂಗಳೂರಿನ ಕಲ್ಯಾಣಂರಾಘವೇಂದ್ರರಾವ್ ನೇತೃತ್ವ ವಹಿಸಿದ್ದರು.

ದೇವಸ್ಥಾನ ಸಮಿತಿಯ ಎಂ.ಎಸ್. ಅನಂತ ಪಭ್ಮನಾಭ, ಎಂ.ಎಸ್. ಗುರುರಾಜ್, ಎಂ.ಎಸ್. ವೇಣುಗೋಪಾಲ್, ಎಂ.ಎಸ್. ಶ್ರೀಧರ್, ಎಂಎಸ್.ಗೋಪಿನಾಥ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.