ADVERTISEMENT

ಸಾಲದಿಂದ ರೈತರನ್ನು ಋಣ ಮುಕ್ತರನ್ನಾಗಿಸಿ: ಎಚ್‌. ಆಂಜನೇಯ

ಕೊಟ್ಟ ಮಾತು ತಪ್ಪಬೇಡಿ; ಮುಖ್ಯಮಂತ್ರಿಗೆ ಮಾಜಿ ಸಚಿವ ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2019, 9:50 IST
Last Updated 23 ಸೆಪ್ಟೆಂಬರ್ 2019, 9:50 IST
ಎಚ್.ಆಂಜನೇಯ.
ಎಚ್.ಆಂಜನೇಯ.   

ಚಿತ್ರದುರ್ಗ: ‘ಸಾಲದಿಂದ ಈಗಾಗಲೇ ನೊಂದಿರುವ ರಾಜ್ಯದ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ಮೂಲಕ ಋಣ ಮುಕ್ತರನ್ನಾಗಿಸಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮಾಜಿ ಸಚಿವ ಎಚ್. ಆಂಜನೇಯ ಒತ್ತಾಯಿಸಿದ್ದಾರೆ.

ತಾಲ್ಲೂಕಿನ ಬಹದ್ದೂರ್ ಘಟ್ಟದ ಕಾರ್ಯಕ್ರಮವೊಂದರಲ್ಲಿ ಸೋಮವಾರ ಮಾತನಾಡಿದ ಅವರು, ‘ಅಧಿಕಾರ ವಹಿಸಿಕೊಂಡ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡಿ ಋಣ ಮುಕ್ತರನ್ನಾಗಿಸುತ್ತೇನೆ ಎಂದು ಯಡಿಯೂರಪ್ಪ ಅವರು ಹಿಂದೆ ಭರವಸೆ ನೀಡಿದ್ದರು. ರಾಜ್ಯದಲ್ಲಿ ನೆರೆಯಿಂದ ತೊಂದರೆ ಉಂಟಾಗಿರುವ ಕಾರಣ ಬೇಕಾದರೆ ಇನ್ನೂ ಸಮಯ ತೆಗೆದುಕೊಳ್ಳಲಿ. ಆದರೆ, ಕೊಟ್ಟ ಮಾತು ಯಾವ ಕಾರಣಕ್ಕೂ ತಪ್ಪದೇ, ವಿಶ್ವಾಸ ಉಳಿಸಿಕೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

‘ಜಿಲ್ಲೆಯ ಹೊಳಲ್ಕೆರೆ ಹಾಗೂ ಚಿತ್ರದುರ್ಗ ತಾಲ್ಲೂಕಿನ ಸುಮಾರು 44 ಕೆರೆಗಳಿಗೆ ತುಂಗ-ಭದ್ರಾ ಜಲಾಶಯದಿಂದ ನೀರು ತುಂಬಿಸುವ ಯೋಜನೆಗೆ ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಶ್ರಮಿಸಿದ್ದಾರೆ. ನಾನೂ ಈ ಹಿಂದೆ ಸಚಿವನಾಗಿದ್ದ ಸಂದರ್ಭದಲ್ಲಿ 43 ಕೆರೆಗಳಿಗೆ ಡಿಪಿಆರ್ ಮಾಡಿಸಿಕೊಟ್ಟಿದ್ದೇನೆ. ಕೂಡಲೇ ರಾಜ್ಯದ ಮುಖ್ಯಮಂತ್ರಿ ಗುತ್ತಿಗೆ ಕರೆದು ಪ್ರಕ್ರಿಯೆಗೆ ಚಾಲನೆ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.