ಚಿತ್ರದುರ್ಗ: ‘ಲಾರ್ವಾ ಮತ್ತು ಸೊಳ್ಳೆ ಮುಕ್ತ ಶಾಲೆಯು ಸಮುದಾಯಕ್ಕೆ ಆದರ್ಶನೀಯ’ ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ರಂಗಾರೆಡ್ಡಿ ಹೇಳಿದರು.
ಇಲ್ಲಿನ ಗುಮಾಸ್ತರ ಕಾಲೊನಿಯ ಶರಣ ಬಸವೇಶ್ವರ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಲಾರ್ವಾ ಮುಕ್ತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕೀಟಜನ್ಯ ರೋಗಗಳು ಸೊಳ್ಳೆ ಕಚ್ಚುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಮುಂಗಾರು ಪ್ರಾರಂಭದಲ್ಲಿ ಶಾಲೆಯ ಸುತಮುತ್ತ ಪರಿಸರ ಸ್ನೇಹಿ ವಾಯವಾರಣ ಇಟ್ಟುಕೊಳ್ಳಬೇಕು’ ಎಂದು ಮನವಿ ಮಾಡಿದರು.
‘ಶಾಲೆಗಳ ಆವರಣದಲ್ಲಿ ಫನತ್ಯಾಜ್ಯ ವಸ್ತುಗಳು ಹಾಕಬಾರದು. ಕೊಠಡಿಯಲ್ಲಿ ಸ್ವಚ್ಛತೆ ಇರುವಂತೆ ನೋಡಿಕೊಳ್ಳಬೇಕು’ ಎಂದರು.
ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಯೋಗೇಶ್ವರಪ್ಪ, ರುದ್ರಮುನಿ, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳಾದ ರೂಪ, ಪವಿತ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.