ಚಳ್ಳಖೆರೆ: ಚಳ್ಳಕೆರೆ ಲ್ಯಾಪರೋಸ್ಕೋಪಿ, ಹೆರಿಗೆ ಮತ್ತು ಬಂಜೆತನ ನಿವಾರಣಾ ಕೇಂದ್ರ, ಸಿಜಿಎಸ್ ಆಸ್ಪತ್ರೆ ಸಹಯೋಗದಲ್ಲಿ ಜುಲೈ 20ರಂದು ಹೃದಯ ಆರೋಗ್ಯ ಸಂರಕ್ಷಣೆ ಹಾಗೂ ಮಧುಮೇಹ ಸಲಹೆ ಮತ್ತು ಸ್ಪಂದನ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ ಆಯೋಜಿಸಲಾಗಿದೆ ಎಂದು ಸ್ತ್ರೀರೋಗ ತಜ್ಞೆ ಡಾ.ಆರ್. ಪೂಜಾ ತಿಳಿಸಿದರು.
ಆಧುನಿಕ ಜೀವನ ಶೈಲಿ ಪರಿಣಾಮ ಜನರ ಆರೋಗ್ಯ ತುಂಬಾ ಹದಗೆಡುತ್ತಿದೆ. ಹೀಗಾಗಿ ಆರೋಗ್ಯದ ಮಹತ್ವ ತಿಳಿಸಲು ಬೆಂಗಳೂರು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್.ರವೀಂದ್ರನಾಥ್ ರವರು ಹೃದಯದ ಆರೋಗ್ಯ ಸಂರಕ್ಷಣೆ ಕುರಿತು ಮಾರ್ಗದರ್ಶನ ನೀಡುವರು’ ಎಂದು ಶುಕ್ರವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಸಾಹಿತಿ ತಿಪ್ಪಣ್ಣ ಮರಿಕುಂಟೆ ಹೇಳಿದರು.
ತುಮಕೂರು ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಸಲಹಾ ತಜ್ಞ ಡಾ.ಆರ್.ಮುದ್ದುರಂಗಪ್ಪ ಮಧುಮೇಹ ಮತ್ತು ಜೀವನ ಶೈಲಿ ಕುರಿತು ಮಾತನಾಡುವರು. ಶಾಸಕ ಟಿ.ರಘುಮೂರ್ತಿ ಸ್ಪಂದನಾ ಅಭಿನಂದನಾ ಗ್ರಂಥ ಲೋಕಾರ್ಪಣೆಗೊಳಿಸುವರು.
ಸಾಹಿತಿ ಪ್ರೊ.ಜಿ.ಶರಣಪ್ಪ, ಬೆಂಗಳೂರು ವಿವಿ ವಿಶ್ರಾಂತ ಕುಸಚಿವ ಪ್ರಾಣೇಶ್ ಗುಡೂರು, ಮಕ್ಕಳ ತಜ್ಞ ಡಾ.ಎಚ್. ಹನುಮಂತರಾಯ, ಜಾನಪದ ವಿದ್ವಾಂಸ ಮೀರಾಸಾಬಿಹಳ್ಳಿ ಶಿವಣ್ಣ, ನಗರಸಭೆ ಅಧ್ಯಕ್ಷೆ ಶಿಲ್ಪಾ, ಉಪಾಧ್ಯಕ್ಷೆ ಕವಿತಾ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನ ಭಾಗವಹಿಸುವರು ಎಂದು ಹೇಳಿದರು.
ನಿವೃತ್ತ ಉಪನ್ಯಾಸಕ ಚೌಳೂರು ಈರಣ್ಣ, ವೈದ್ಯ ಡಾ.ವಿಶ್ವನಾಥ ಗುಪ್ತ, ಬಂಡಾಯ ಸಾಹಿತಿ ಪ್ರೊ.ಸಿ.ಶಿವಲಿಂಗಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.