ಹಿರಿಯೂರು: ನಗರದ ನಂದಿನಿ ಹೋಟೆಲ್ ಮುಂಭಾಗದಲ್ಲಿ ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಬಾಪು ಸ್ಪೋರ್ಟ್ಸ್ ಕ್ಲಬ್ ತಂಡದಿಂದ ಸಾರ್ವಜನಿಕರಿಗೆ ಉಚಿತವಾಗಿ ಮಜ್ಜಿಗೆ ಪಾಕೆಟ್‌ಗಳನ್ನು ಶನಿವಾರ ವಿತರಿಸಲಾಯಿತು.
‘ಯುಗಾದಿ ಹಬ್ಬದ ಸಂತೆಗೆ ಗ್ರಾಮೀಣ ಭಾಗದಿಂದ ಬರುತ್ತಿದ್ದ ಗ್ರಾಹಕರಿಗೆ ಕುಡಿಯುವ ನೀರು ಸಿಗದೆ ಪರದಾಡುವ ಸ್ಥಿತಿ ಇತ್ತು. ನಗರದಲ್ಲಿ ಎಲ್ಲಿಯೂ ಸಾರ್ವಜನಿಕವಾಗಿ ಕುಡಿಯುವ ನೀರು ಸಿಗುವಂತಹ ವ್ಯವಸ್ಥೆ ಇರಲಿಲ್ಲ. ಹೋಟೆಲ್‌ಗಳಲ್ಲಿ ಊಟ–ಉಪಹಾರ ತೆಗೆದುಕೊಂಡವರಿಗೆ ಮಾತ್ರ ನೀರು ಕೊಡುವ ಷರತ್ತು ಹಾಕುತ್ತಿದ್ದರು. 18 ವರ್ಷಗಳ ಹಿಂದೆಯೇ ಸಾರ್ವಜನಿಕರ ದಾಹ ನೀಗಿಸುವ ಉದ್ದೇಶದಿಂದ ಹದಗೊಳಿಸಿದ ಮಜ್ಜಿಗೆ ವಿತರಿಸುವ ಯೋಜನೆ ಆರಂಭಿಸಿದೆವು’ ಎಂದು ಕ್ಲಬ್ ಅಧ್ಯಕ್ಷ ಎಚ್.ವಿ. ಸೂರ್ಯನಾರಾಯಣ ಹೇಳಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಕೆ.ವಿ. ಅಮರೇಶ್, ಎಚ್.ಎಂ.ಎಸ್.ಅಸ್ಗರ್ ಅಹಮದ್, ಬಿ. ರಾಜಶೇಖರ್, ಎಚ್.ಆರ್. ತಿಮ್ಮಯ್ಯ, ಎಂ.ಓ.ಮಂಜುನಾಥ್, ಓಂಕಾರಪ್ಪ, ಅನಿಲ್ ನಾಯಕ್, ನಿವೃತ್ತ ಮುಖ್ಯ ಶಿಕ್ಷಕ ಎಂ.ಜಿ. ಗೋಪಾಲ್, ಪಲ್ಲವಿ ಅಭಿಷೇಕ್ ಸೂರಿ, ಪೂಜಾ, ನರೇಂದ್ರ ಬಾಬು, ಚೋಟು ದಾದಾ, ಮಹೇಶ್, ಮೂರ್ತಿ, ಖಲೀಲ್ , ಎಲ್.ಐಸಿ. ನಾಗರಾಜ್, ಎಂ.ಎಲ್. ಅಶೋಕ್ ಬಾಬು, ಶ್ರೀನಿವಾಸ್, ಗಣೇಶ್ ರಾವ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.