ADVERTISEMENT

ಹಿರಿಯೂರು: ಕಾರಿನ ಗಾಜು ಒಡೆದು ₹4.75 ಲಕ್ಷ ದೋಚಿದ ಕಳ್ಳರು

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 15:53 IST
Last Updated 12 ಜೂನ್ 2025, 15:53 IST
ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯ.
ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯ.   

ಹಿರಿಯೂರು: ಬೈಕಿನಲ್ಲಿ ಬಂದ ಕಳ್ಳರಿಬ್ಬರು ಮುಂಭಾಗದ ಬಾಗಿಲಿನ ಗಾಜು ಒಡೆದು ಕಾರಿನಲ್ಲಿದ್ದ ₹4.75 ಲಕ್ಷ ನಗದು ಲಪಟಾಯಿಸಿರುವ ಘಟನೆ ಗುರುವಾರ ನಗರದ ಜನನಿಬಿಡ ವಲ್ಲಭಬಾಯಿ ಪಟೇಲ್ ರಸ್ತೆಯಲ್ಲಿ ಹಾಡಹಗಲೇ ನಡೆದಿದೆ.

ಹಿರಿಯೂರಿನ ದೃಷ್ಠಿಧಾಮ ಕಣ್ಣಿನ ಆಸ್ಪತ್ರೆಯ ಮಾಲೀಕ ವಿ.ಡಿ. ಅರುಣ್ ಕುಮಾರ್ ಹಣ ಕಳೆದುಕೊಂಡವರು.

ಜಮೀನು ಖರೀದಿಸಲು ₹5 ಲಕ್ಷ ಹಣವನ್ನು ಬುಧವಾರ ಚಿತ್ರದುರ್ಗದ ಗೆಳೆಯರೊಬ್ಬರಿಂದ ತೆಗೆದುಕೊಂಡು ಬಂದಿದ್ದರು. ಗುರುವಾರ ₹4.75 ಲಕ್ಷ ಹಣವನ್ನು ಕವರ್‌ನಲ್ಲಿ ಇಟ್ಟುಕೊಂಡು, ಗೆಳೆಯ ಪ್ರವೀಣ್ ಪಾಟೀಲ್ ಅವರೊಂದಿಗೆ ವಲ್ಲಭಬಾಯಿ ಪಟೇಲ್ ರಸ್ತೆಯಲ್ಲಿನ ಕೃಷ್ಣಾಚಾರ್ ಅವರ ಮನೆಯ ಸಮೀಪ ಕಾರು ನಿಲ್ಲಿಸಿ ಒಳಗೆ ಹೋಗಿದ್ದರು.

ADVERTISEMENT

ಕ್ಷಣ ಮಾತ್ರದಲ್ಲಿ ಕಪ್ಪುಬಣ್ಣದ, ನೀಲಿ ಸ್ಟಿಕರ್ ಹಾಕಿದ್ದ ಪಲ್ಸರ್ ಬೈಕಿನಲ್ಲಿ ಆಗಮಿಸಿದ ಇಬ್ಬರು ಆಗಂತುಕರು ಕಾರಿನ ಗಾಜು ಒಡೆದು ಹಣದೊಂದಿಗೆ ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 

ಹಿರಿಯೂರು ನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.