ಚಾಕು
(ಸಾಂದರ್ಭಿಕ ಚಿತ್ರ)
ಹೊಸದುರ್ಗ: ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್‌ಗಳ ರೂಟ್ ವಿಚಾರವಾಗಿ ಚಾಲಕ ಹಾಗೂ ಏಜೆಂಟ್ ಮಧ್ಯೆ ಶನಿವಾರ ಗಲಾಟೆ ನಡೆದಿದೆ. ಈ ವೇಳೆ ಬಸ್ ಚಾಲಕನಿಗೆ ಚಾಕುವಿನಿಂದ ಹಲ್ಲೆ ನಡೆದಿದೆ.
ತಾಲ್ಲೂಕಿನ ಗುತ್ತಿಕಟ್ಟೆ ಗ್ರಾಮದ ಪ್ರವೀಣ್ ಎಂಬವರು ಗಾಯಗೊಂಡಿದ್ದು, ಅವರನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಖಾಸಗಿ ಬಸ್ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರವೀಣ್, ಶನಿವಾರ ಮಧ್ಯಾಹ್ನ ಬಸ್ ನಿಲ್ಲಿಸಿ ಕೆಳಗಿಳಿಯುವಾಗ ಬಸ್ ಏಜೆಂಟ್, ಮಧುರೆ ಗ್ರಾಮದ ಶ್ರೀನಿವಾಸ್ ತಡೆದರು. ತಡವಾಗಿ ಬಂದು, ತಡವಾಗಿ ಹೋಗುತ್ತಿರುವುದಕ್ಕೆ ಆಕ್ಷೇಪಿಸಿದರು ಎನ್ನಲಾಗಿದೆ.
ಇಬ್ಬರ ನಡುವಿನ ವಾಗ್ವಾದ ಅತಿರೇಕಕ್ಕೆ ಹೋಯಿತು. ಶ್ರೀನಿವಾಸ್ ಚಾಕುವಿನಿಂದ ಹೊಟ್ಟೆಗೆ ಚುಚ್ಚಲು ಬಂದಾಗ ಪ್ರವೀಣ್ ತಪ್ಪಿಸಿಕೊಳ್ಳಲು ಯತ್ನಿಸಿದರು ಎನ್ನಲಾಗಿದೆ. ತಲೆಯ ಎಡಭಾಗದಲ್ಲಿ ಚುಚ್ಚಿದ ಗಾಯವಾಗಿ, ರಕ್ತಸ್ರಾವವಾಯಿತು. ಕೂಡಲೇ ಅಲ್ಲಿದ್ದವರು ಗಲಾಟೆ ಬಿಡಿಸಿ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿದರು.
ಈ ಕುರಿತು ಹೊಸದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.