ADVERTISEMENT

ಹೊಸದುರ್ಗ: ಕೊರೊನಾ ನಾಳೆ ಬಾ, ತೊಲಗು ನಮ್ಮೂರನ್ನು ಬಿಟ್ಟು..

ಹೊಸದುರ್ಗದ ಕಂಚೀಪುರ ಗ್ರಾಮದ ಬೋರ್ ಬಸಣ್ಣ ಮನೆಯ ಮುಂದೆ ಫಲಕ

​ಪ್ರಜಾವಾಣಿ ವಾರ್ತೆ
Published 4 ಮೇ 2021, 5:24 IST
Last Updated 4 ಮೇ 2021, 5:24 IST
ಹೊಸದುರ್ಗ ತಾಲ್ಲೂಕಿನ ಕಂಚೀಪುರ ಗ್ರಾಮದ ಬೋರ್ ಬಸಣ್ಣ ಅವರ ಮನೆ ಮುಂದೆ ಹಾಕಿರುವ ನಾಮಫಲಕ.
ಹೊಸದುರ್ಗ ತಾಲ್ಲೂಕಿನ ಕಂಚೀಪುರ ಗ್ರಾಮದ ಬೋರ್ ಬಸಣ್ಣ ಅವರ ಮನೆ ಮುಂದೆ ಹಾಕಿರುವ ನಾಮಫಲಕ.   

ಹೊಸದುರ್ಗ: ‘ಕಂಚೀವರದಸ್ವಾಮಿ ಇದ್ದಾರೆ. ಕೊರೊನಾ ನಾಳೆ ಬಾ, ತೊಲಗು ನಮ್ಮೂರ ಬಿಟ್ಟು’ ತಾಲ್ಲೂಕಿನ ಕಂಚೀಪುರ ಗ್ರಾಮದ ಬೋರ್ ಬಸಣ್ಣ ತನ್ನ ಮನೆಯ ಮುಂದೆ ಹಾಕಿರುವ ನಾಮಫಲಕವಿದು.

ಗ್ರಾಮ ಪಂಚಾಯಿತಿ ಕೇಂದ್ರ ಆಗಿರುವ ಕಂಚೀಪುರದಲ್ಲಿ ಸಾವಿರ ಮನೆ ಇದೆ. ಎಲ್ಲಾ ವರ್ಗದ 5 ಸಾವಿರಕ್ಕೂ ಹೆಚ್ಚು ಜನರು ವಾಸಿಸುವ ದೊಡ್ಡ ಗ್ರಾಮ. ನೆರೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬಂದ್ರಿಹಳ್ಳಿ ಬಸಣ್ಣ ಹಾಗೂ ಅವರ ಕುಟುಂಬ ವರ್ಗದವರು 20 ವರ್ಷಗಳಿಂದ ಕಂಚೀಪುರದಲ್ಲಿ ನೆಲೆಸಿದ್ದಾರೆ. ವಿದ್ಯುತ್ ಹಾಗೂ ಪಂಪ್‌ಸೆಟ್ ದುರಸ್ತಿ ಕಾಯಕ ಮಾಡುತ್ತಿರುವುದರಿಂದ ಬೋರ್ ಬಸಣ್ಣ ಎಂದು ಹೆಸರಾಗಿದ್ದಾರೆ.

‘ಕೊರೊನಾ 2ನೇ ಅಲೆಯ ಸೋಂಕಿತರು ರಾಜ್ಯದೆಲ್ಲೆಡೆ ಹೆಚ್ಚಾಗುತ್ತಿದ್ದಾರೆ. ಆದರೆ, ಕಂಚೀಪುರದ ಮೂಲನಿವಾಸಿಗಳಿಗೆ ಇಲ್ಲಿಯವರೆಗೆ ಯಾರಿಗೂ ಸೋಂಕು ತಗುಲಿಲ್ಲ. ಗ್ರಾಮದಲ್ಲಿ ನೆಲೆಸಿರುವ ಕಂಚೀವರದಸ್ವಾಮಿ ಕೃಪೆಯಿಂದ ಗ್ರಾಮದ ರೈತರು ಹಾಗೂ ಎಲ್ಲಾ ವರ್ಗದ ಜನರು ಆರೋಗ್ಯವಾಗಿಬೇಕು. ಯಾರು ಸೋಂಕು ಅಂಟಿಸಿಕೊಂಡು ನನ್ನ ಬಳಿ ಬರಬಾರದು. ನಾನು ಯಾರ ಬಳಿ ಹೋಗಬಾರದು ಎಂಬ ನಂಬಿಕೆಯಿಂದ ಈ ರೀತಿ ನಾಮಫಲಕ ಹಾಕಿದ್ದೇನೆ’ ಎನ್ನುತ್ತಾರೆ ಬೋರ್ ಬಸಣ್ಣ.

ADVERTISEMENT

‘ಎಲ್ಲರೂ ಸರ್ಕಾರದ ನಿಯಮಗಳನ್ನು ಪಾಲಿಸುವ ಮೂಲಕ ಜೀವವನ್ನು ರಕ್ಷಿಸಿಕೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.