ADVERTISEMENT

ಹೊಸದುರ್ಗ: ಉತ್ತರಾಧಿಕಾರಿ ನೇಮಿಸುವಂತೆ ಶಾಂತವೀರ ಸ್ವಾಮೀಜಿ ಮನವಿ

​ಪ್ರಜಾವಾಣಿ ವಾರ್ತೆ
Published 5 ಮೇ 2025, 15:47 IST
Last Updated 5 ಮೇ 2025, 15:47 IST
ಶಾಂತವೀರ ಸ್ವಾಮೀಜಿ
ಶಾಂತವೀರ ಸ್ವಾಮೀಜಿ   

ಹೊಸದುರ್ಗ: ‘ಹೊಸದುರ್ಗದ ಕುಂಚಿಟಿಗ ಮಠ ಅವಿಚ್ಛಿನ್ನವಾಗಿ ಮುನ್ನಡೆಯಬೇಕೆಂಬ ಆಶಯ ನಮ್ಮದು. ಮಠಕ್ಕೆ ಉತ್ತರಾಧಿಕಾರಿ ನೇಮಿಸಲು ಬಯಸಿದ್ದು, ಆಸಕ್ತ ಭಕ್ತರು ತಮ್ಮ ಮಕ್ಕಳನ್ನು ಅಥವಾ ತಮಗೆ ಗೊತ್ತಿರುವ ಯುವಕರನ್ನು ಕರೆದುಕೊಂಡು ಬಂದಲ್ಲಿ ದೀಕ್ಷಾ ಶಿಕ್ಷಣ ನೀಡಿ ಪೀಠಕ್ಕೆ ಉತ್ತರಾಧಿಕಾರಿಯಾಗಿ ನೇಮಿಸಲಾಗುವುದು’ ಎಂದು ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘28 ವರ್ಷಗಳಿಂದ ನಿರಂತರ ಹೋರಾಟ ಹಾಗೂ ಕಾರ್ಯಕ್ರಮ ಮಾಡುತ್ತಾ ರಾಜ್ಯ, ಹೊರ ರಾಜ್ಯಗಳಲ್ಲಿ ಪ್ರವಾಸ ಕೈಗೊಂಡು ಕುಂಚಿಟಿಗ ಸಮುದಾಯವನ್ನು ಜಾಗೃತರಾಗಿಸಿದ ಹೆಮ್ಮೆ ಮತ್ತು ಸಂತೃಪ್ತಿ ಇದೆ. ಸಮುದಾಯದ ಮೀಸಲಾತಿ ಮತ್ತು ಅವರ ಧ್ವನಿಯಾಗಿ ಕೆಲಸ ಮಾಡಿದ್ದೇವೆ. ಮಠಪೀಠಗಳು, ಸಂಘ ಸಂಸ್ಥೆಗಳು ಶಾಶ್ವತವೇ ಹೊರತು ಅಲ್ಲಿ ಬರುವ ವ್ಯಕ್ತಿಗಳಲ್ಲ. ಹಾಗಾಗಿ ತಕ್ಷಣ ಈ ನಿಟ್ಟಿನಲ್ಲಿ ಸಮುದಾಯದ ಸಂಘಟನೆಗಳು ಮತ್ತು ಭಕ್ತರು ತುರ್ತಾಗಿ ಈ ಕಾರ್ಯವನ್ನು ಮಾಡಬೇಕು’ ಎಂದಿದ್ದಾರೆ.

‘ಒಂದು ವೇಳೆ ಭಕ್ತರು ಯಾರನ್ನೂ ಕರೆತರದಿದ್ದರೆ ನಾವು ಕೈಗೊಳ್ಳುವ ಎಲ್ಲಾ ತೀರ್ಮಾನಕ್ಕೆ ಭಕ್ತರ ಸಮ್ಮತಿ ಇದೆ ಎಂದು ಭಾವಿಸುತ್ತೇವೆ’ ಎಂದು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.