ಹೊಸದುರ್ಗ: ದ್ವಿಚಕ್ರ ವಾಹನ ಕದಿಯುತ್ತಿದ್ದ ಇಬ್ಬರು ಕಳ್ಳರನ್ನು ಸೋಮವಾರ ಪಟ್ಟಣ ಠಾಣೆಯ ಪೊಲೀಸರು ಬಂಧಿಸಿ ₹ 7 ಲಕ್ಷ ಮೌಲ್ಯದ 11 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಚಿತ್ರದುರ್ಗ ನಗರದ ಕಾವಡಿಗರ ಹಟ್ಟಿಯವರಾದ ದಾದಾಪೀರ್ ಅಲಿಯಾಸ್ ದಾದು (28) ಹಾಗೂ ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕ ಬಂಧಿತರು.
ಆರೋಪಿಗಳ ಕಡೆಯಿಂದ ಹೊಸದುರ್ಗ ಠಾಣೆ ವ್ಯಾಪ್ತಿಯಲ್ಲಿ 4 ಮೋಟಾರ್ ಸೈಕಲ್ ಕಳವು ಪ್ರಕರಣ, ಚಿತ್ರದುರ್ಗ ಟೌನ್ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 3, ಚಳ್ಳಕೆರೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ 1, ಭರಮಸಾಗರ 1, ಹಿರಿಯೂರು 1, ದಾವಣಗೆರೆ ಕೆ.ಟಿ.ಜೆ ನಗರ ಠಾಣೆಯ 1 ಪ್ರಕರಣಕ್ಕೆ ಸಂಬಂಧಿಸಿದ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಎಸ್ಪಿ ರಂಜಿತ್ ಕುಮಾರ್ ಬಂಡಾರು, ಎಎಸ್‌ಪಿ ಉಮೇಶ್ ಈಶ್ವರ್ ನಾಯ್ಕ ಮಾರ್ಗದರ್ಶನದಲ್ಲಿ ತಂಡ ರಚಿಸಲಾಗಿತ್ತು. ಡಿವೈಎಸ್ಪಿ ಟಿ.ಎಂ. ಶಿವಕುಮಾರ್, ಪಿ.ಐ ಕೆ.ಟಿ. ರಮೇಶ್, ಪಿ.ಎಸ್.ಐ ಮಹೇಶ್ ಕುಮಾರ್, ಸಿಬ್ಬಂದಿ ಉಮೇಶ್, ಕುಮಾರ, ಗಂಗಾಧರ, ರಾಜಣ್ಣ, ಚಿದಾನಂದ, ಮಧು, ಜಗದೀಶ್, ಸತೀಶ, ಪ್ರಕಾಶ್ ತನಿಖಾ ತಂಡದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.