ಚಳ್ಳಕೆರೆ : ಕಾಲೇಜು ವಿದ್ಯಾರ್ಥಿನಿಯ ಇನ್‍ಸ್ಟಗ್ರಾಮ್ ಬಳಸಿ ಅಶ್ಲೀಲ ಚಿತ್ರ ಎಡಿಟ್ ಮಾಡಿ ಟ್ರೋಲ್ ಮಾಡುತ್ತಿದ್ದ 16 ವರ್ಷದ ಬಾಲಕನನ್ನು ನಾಗರಿಕರು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಬಾಲಕ ಅಂಬೇಡ್ಕರ್ ನಗರದ ನಿವಾಸಿಯಾಗಿದ್ದು, ಫೇಸ್‌ಬುಕ್ ಅಕೌಂಟ್ ಕ್ರಿಯೇಟ್ ಮಾಡಿ ಹುಡುಗಿಯರ ಆಶ್ಲೀಲ ಫೋಟೊ ಕ್ರಿಯೇಟ್ ಮಾಡುವ ಮೂಲಕ ಆ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುತ್ತಿದ್ದ. ಇದನ್ನು ಗಮನಿಸಿದ ನಾಗರಿಕರು ಬಾಲಕನನ್ನು ಹಿಡಿದು, ಥಳಿಸಿ ನಂತರ ಠಾಣೆಗೆ ಒಪ್ಪಿಸಿದರು. ಈ ವೇಳೆ ಠಾಣೆಯ ಮುಂದೆ ನೂರಾರು ಜನರು ಸೇರಿದ್ದರು.
ಚಿತ್ರದುರ್ಗದ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.