ಸಿರಿಗೆರೆ: ಇಲ್ಲಿನ ಬಿ. ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಗೆ ಶೇ 65 ಫಲಿತಾಂಶ ತಂದುಕೊಟ್ಟಿದ್ದಾರೆ.
ಪರೀಕ್ಷೆಗೆ ಕುಳಿತಿದ್ದ 211 ವಿದ್ಯಾರ್ಥಿಗಳಲ್ಲಿ 136 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅತ್ಯುನ್ನತ ದರ್ಜೆಯಲ್ಲಿ 21, ಪ್ರಥಮ ದರ್ಜೆ 78, ದ್ವಿತೀಯ ದರ್ಜೆ 34 ಹಾಗೂ ಮೂವರು ತೃತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ.
ಜಿ.ಎಂ. ಸಿಂಚನಾ ಶೇ 98.72, ಕಾರ್ತಿಕ್ ಪ್ರಭು ಮತ್ತೂರು ಶೇ 97.92, ವಿ. ಯಮುನಾ ಶೇ 97.44, ಎಂ.ವಿ. ರಾಕೇಶ್ ಶೇ 97.44, ಬಿ.ಎಸ್. ಧನುಶ್ ಶೇ 96 ಅಂಕ ಗಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.