ಮೊಳಕಾಲ್ಮುರು: ತಾಲ್ಲೂಕಿನ ಗಡಿಗ್ರಾಮವಾದ ಚಿಕ್ಕೋಬನಹಳ್ಳಿಯಲ್ಲಿ ಮೇ 11ರಂದು ಗ್ರಾಮದೇವತೆ ಕೆಂಚೋಬಳೇಶ್ವರಸ್ವಾಮಿ ದೇವಸ್ಥಾನ ಉದ್ಘಾಟನೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಸ್ವಾಮಿಯ ಉತ್ಸವಮೂರ್ತಿಗಳನ್ನು ಗ್ರಾಮಸ್ಥರು ವಿಜಯನಗರ ಜಿಲ್ಲೆಯ ಹಂಪಿಯ ತುಂಗಭದ್ರಾ ನದಿ ತೀರಕ್ಕೆ ಗಂಗಾಪೂಜೆಗೆ ಕರೆದೊಯ್ಯಲಾಗಿತ್ತು.
ಶುಕ್ರವಾರ ದೇವರ ಗ್ರಾಮಪ್ರವೇಶವಾಗಿದ್ದು, ಕುಂಭಮೇಳ, ಕಳಸ ಮೆರವಣಿಗೆ, ವಿವಿಧ ವಾದ್ಯಗಳ ಸಮ್ಮುಖದಲ್ಲಿ ಮುಖ್ಯಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ ದೇವಸ್ಥಾನ ಪ್ರವೇಶ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು.
ಶನಿವಾರ ಗಣಪತಿ, ಉಮಾಮಹೇಶ್ವರಿ, ಲಕ್ಷ್ಮೀ ನಾರಾಯಣ, ನವಗ್ರಹ, ಅಷ್ಟಲಕ್ಷ್ಮೀ, ರುದ್ರಾಭಿಷೇಕ, ಮಹಾ ಮೃತ್ಯುಂಜಯ ಹೋಮ ಆಯೋಜಿಸಲಾಗಿದೆ. ಮೇ 11ರಂದು ಬೆಳಿಗ್ಗೆ ಹೋಮ, ಕಳಶಾರೋಹಣ ನಡೆಯಲಿದೆ.
ಕೂಡ್ಲಿಗಿ ಹಿರೇಮಠದ ಪ್ರಶಾಂತಸಾಗರ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಮಾದಾರ ಚನ್ನಯ್ಯ ಸ್ವಾಮೀಜಿ, ಸಿದ್ದಯ್ಯನಕೋಟೆ ಬಸವಲಿಂಗ ಸ್ವಾಮೀಜಿ, ಬೋರೇಶ್ ಗುರೂಜಿ ಆಶ್ರಮದ ಶಿವಮೂರ್ತಿ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.