ADVERTISEMENT

ಕಾರ್ಮಿಕ ಸಚಿವರ ವಿರುದ್ಧ ಧಿಕ್ಕಾರ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2019, 14:26 IST
Last Updated 1 ಮಾರ್ಚ್ 2019, 14:26 IST
ವೆಂಕಟರಮಣಪ್ಪ
ವೆಂಕಟರಮಣಪ್ಪ   

ಚಿತ್ರದುರ್ಗ: ಕಾರ್ಮಿಕ ಸಮ್ಮಾನ್ ಪ್ರಶಸ್ತಿ ಕಾರ್ಯಕ್ರಮ ರದ್ದಾದ ಹಿನ್ನೆಲೆಯಲ್ಲಿ ನೂರಾರು ಕಾರ್ಮಿಕರು ಕಾರ್ಮಿಕ ಸಚಿವ ವೆಂಕಟರಮಣಪ್ಪ ಅವರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ತರಾಸು ರಂಗಮಂದಿರದಲ್ಲಿ ಶುಕ್ರವಾರ ಕಾರ್ಯಕ್ರಮ ನಿಗದಿಯಾಗಿತ್ತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅನೇಕ ಕಾರ್ಮಿಕರನ್ನು ಕಾರ್ಮಿಕ ಸಚಿವರು ಸನ್ಮಾನಿಸಬೇಕಾಗಿತ್ತು. ಸಚಿವರು ನಿಗದಿತ ವೇಳೆಗೆ ಬಾರದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದಾಯಿತು. ಈ ವಿಷಯ ತಿಳಿಯುತ್ತಿದ್ದಂತೆ ನೂರಾರು ಜನ ಸಚಿವರ ವಿರುದ್ಧ ಧಿಕ್ಕಾರ ಕೂಗಿದರು.

ಕಾರ್ಮಿಕ ಇಲಾಖೆ ಅಧಿಕಾರಿಗಳು ಸಮಾಧಾನಪಡಿಸಿದರೂ ಕಾರ್ಮಿಕರು ಅದಕ್ಕೆ ಸುಮ್ಮನಾಗಲಿಲ್ಲ. ‘ಅವರು ಬರದಿದ್ದರೂ ಪರವಾಗಿಲ್ಲ. ನೀವೇ ಕಾರ್ಯಕ್ರಮ ಮಾಡಿ, ಸನ್ಮಾನಿಸಿ’ ಎಂದು ಒತ್ತಾಯ ಮಾಡಿದರು.

ADVERTISEMENT

‘ಶಿಷ್ಟಾಚಾರದ ಪ್ರಕಾರ ಜನಪ್ರತಿನಿಧಿಗಳಿಲ್ಲದೆ, ನಾವು ಮಾಡುವಂತಿಲ್ಲ’ ಎಂದು ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.