ಕಾರ್ಗಲ್ ಪಟ್ಟಣದ ಕೆಪಿಸಿ ಎಂಪ್ಲಾಯೀಸ್ ಯೂನಿಯನ್ ಆವರಣದಲ್ಲಿ ಎಂಪ್ಲಾಯೀಸ್ ಯೂನಿಯನ್ ಆವರಣದಲ್ಲಿ ಕಾರ್ಮಿಕ ದಿನಾಚರಣೆ ಅಂಗವಾಗಿ ಕೆ. ವೀರೇಂದ್ರ ದ್ವಜಾರೋಹಣ ನೆರವೇರಿಸಿದರು. ಸಂಘದ ಪ್ರಮುಖರು ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾರ್ಗಲ್: ‘ದುಡಿಯುವ ಜನರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಶೋಷಣೆಯಿಂದ ಅವರನ್ನು ರಕ್ಷಿಸಲು ಅಂತರರಾಷ್ಟ್ರೀಯ ಕಾರ್ಮಿಕರ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ’ ಎಂದು ಕೆಪಿಸಿ ಎಂಪ್ಲಾಯೀಸ್ ಯೂನಿಯನ್ ಕೇಂದ್ರ ಸಮಿತಿ ಅಧ್ಯಕ್ಷ ಕೆ. ವೀರೇಂದ್ರ ತಿಳಿಸಿದರು.
ಇಲ್ಲಿನ ಕೆಪಿಸಿ ಎಂಪ್ಲಾಯೀಸ್ ಯೂನಿಯನ್ ಕಚೇರಿಯ ಆವರಣದಲ್ಲಿ ಕಾರ್ಮಿಕ ಧ್ವಜಾರೋಹಣ ಮಾಡಿ ಅವರು ಮಾತನಾಡಿದರು.
‘ಕಾರ್ಮಿಕ ವರ್ಗದವರು ಸಂಘಟಿತರಾಗಿ ಜಾಗೃತರಾದಾಗ ನಮ್ಮ ಸಮಾಜದಲ್ಲಿ ಕಾರ್ಮಿಕ ವರ್ಗದ ಪಾತ್ರ ಹಾಗೂ ದೇಶದ ಏಳಿಗೆಯಲ್ಲಿ ಅವರ ಕೊಡುಗೆಗಳನ್ನು ನೆನಪಿಸುವಂತಾಗುತ್ತದೆ. ಒಬ್ಬ ಕಾರ್ಮಿಕ ಪ್ರತಿ ರಾಷ್ಟ್ರಕ್ಕೂ ದೊಡ್ಡ ಆಸ್ತಿ ಮತ್ತು ಅದ್ಭುತಗಳ ನಿರ್ಮಾತೃ ಆಗಿರುತ್ತಾನೆ. ಪ್ರತಿಯೊಬ್ಬ ಕಾರ್ಮಿಕನೂ ಸ್ವಾವಲಂಬಿಯಾಗಿ ಬದುಕು ಸಾಗಿಸುವ ದಿನಗಳು ಸೃಷ್ಟಿ ಆಗುವವರೆಗೂ ಕಾರ್ಮಿಕರ ಹೋರಾಟ ವಿಶ್ವದಾದ್ಯಂತ ಮುಂದುವರಿಯುತ್ತಲೇ ಇರುತ್ತವೆ’ ಎಂದು ತಿಳಿಸಿದರು.
ಕೆಪಿಸಿ ಉದ್ಯೋಗಿಗಳು ಕಾರ್ಮಿಕ ಧ್ವಜಾರೋಹಣದ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಕಾರ್ಮಿಕ ಶಕ್ತಿ ಚಿರಾಯುವಾಗಲಿ ಎಂದು ಘೋಷಣೆ ಕೂಗಿದರು. ಕಾರ್ಗಲ್ ಎಂಪ್ಲಾಯೀಸ್ ಯೂನಿಯನ್ ಉಪಾಧ್ಯಕ್ಷ ಕೇಶವ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ, ಖಜಾಂಚಿ ನಾಗಭೂಷಣ ಸ್ವಾಮಿ, ಸಹ ಕಾರ್ಯದರ್ಶಿ ನಂದನ್, ನಿರ್ದೇಶಕರಾದ ವರರತ್ನಂ, ರಾಜೇಶ, ರಾಘವೇಂದ್ರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.