ADVERTISEMENT

ಐಐಎಸ್‌ಸಿ ಕ್ಯಾಂಪಸ್‌ನಲ್ಲಿ ಚಿರತೆ ಪ್ರತ್ಯಕ್ಷ: ಆತಂಕ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2020, 2:39 IST
Last Updated 24 ಡಿಸೆಂಬರ್ 2020, 2:39 IST
ನಾಯಕನಹಟ್ಟಿ ಸಮೀಪದ ಕುದಾಪುರ ಭಾರತೀಯ ವಿಜ್ಞಾನ ಸಂಶೋಧನಾ ಕೇಂದ್ರದ ಆವರಣದಲ್ಲಿ ಚಿರತೆಯೊಂದು ಈಚೆಗೆ ನಾಯಿಯನ್ನು ಬೇಟೆಯಾಡಿ ತಿಂದಿರುವುದು
ನಾಯಕನಹಟ್ಟಿ ಸಮೀಪದ ಕುದಾಪುರ ಭಾರತೀಯ ವಿಜ್ಞಾನ ಸಂಶೋಧನಾ ಕೇಂದ್ರದ ಆವರಣದಲ್ಲಿ ಚಿರತೆಯೊಂದು ಈಚೆಗೆ ನಾಯಿಯನ್ನು ಬೇಟೆಯಾಡಿ ತಿಂದಿರುವುದು   

ನಾಯಕನಹಟ್ಟಿ: ಸಮೀಪದ ಕುದಾಪುರ ಭಾರತೀಯ ವಿಜ್ಞಾನ ಸಂಶೋಧನಾ ಕೇಂದ್ರದ ಆವರಣದಲ್ಲಿ ವಾರದಿಂದ ಚಿರತೆ ಓಡಾಡುತ್ತಿದ್ದು, ಇಲ್ಲಿನ ಸಿಬ್ಬಂದಿ ಮತ್ತು ತರಬೇತಿ ಯಲ್ಲಿರುವ ಶಿಕ್ಷಕರಲ್ಲಿ ಭಯ ಆವರಿಸಿದೆ.

ಸಂಶೋಧನಾ ಕೇಂದ್ರದ ಹೊಸ ಕ್ಯಾಂಪಸ್‌ನಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ ತರಬೇತಿ ಆರಂಭಗೊಂಡಿದೆ. ವಾರದಿಂದ ಚಿರತೆಯೊಂದು ಪ್ರತ್ಯಕ್ಷವಾಗುತ್ತಿದ್ದು, ಆವರಣದಲ್ಲಿದ್ದ ನಾಯಿಯೊಂದನ್ನು ಬೇಟೆಯಾಡಿದೆ. ಹೀಗಾಗಿ ಕ್ಯಾಂಪಸ್‌ನಲ್ಲಿ ಸಂಜೆಯಾದರೆ ನೀರವ ಮೌನ ಆವರಿಸುತ್ತಿದೆ. ಬೈಕ್‌ಗಳಲ್ಲಿ ಓಡಾಡಲು ಸಿಬ್ಬಂದಿ ಹಾಗೂ ತರಬೇತಿ ನಿರತ ಶಿಕ್ಷಕರು ಆತಂಕಗೊಂಡಿದ್ದಾರೆ.

‘ಸಂಶೋಧನಾ ಕೇಂದ್ರದ ಆವರಣದಲ್ಲಿ ಮೊಲ, ಜಿಂಕೆ, ನವಿಲು, ಕೃಷ್ಣಮೃಗ ಕಾಡುಹಂದಿ ಸೇರಿ ಕಾಡುಪ್ರಾಣಿಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ, ಚಿರತೆಗೆ ಉತ್ತಮ ಆಹಾರ ದೊರೆಯುತ್ತಿರುವ ಸ್ಥಳವಾಗಿದ್ದು, ಹಲವು ದಿನಗಳಿಂದ ಇಲ್ಲೇ ಬೀಡು ಬಿಟ್ಟಂತಿದೆ. ತುರ್ತಾಗಿ ಚಿರತೆಯನ್ನು ಹಿಡಿದು ಸಿಬ್ಬಂದಿ ಭಯವನ್ನು ಹೋಗಲಾಡಿಸಬೇಕು’ ಎಂದು ಐಐಎಸ್‌ಸಿ ಎಂಜಿನಿಯರ್ ಹೇಮಂತ್ ಅವರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.